ಮಾಂಸ ರಹಿತ ಆಹಾರ ಸೇವನೆ ತೂಕ ಇಳಿಕೆಗೆ ಸಹಾಯ ಮಾಡುವುದಲ್ಲದೇ ಹೃದ್ರೋಗದ ವಿರುದ್ಧವೂ ರಕ್ಷಣೆ ನೀಡುತ್ತದೆ. ಇದರ ಜೊತೆಗೆ ಪರಿಸರ ಸಂರಕ್ಷಣೆಯಂತಹ ಪ್ರಯೋಜನಗಳೂ ಇವೆ. ಸಸ್ಯಾಹಾರಿಗಳು ಎದುರಿಸುತ್ತಿರುವ ಪ್ರಮುಖ ಸವಾಲು ಎಂದರೆ ಮಾಂಸಾಹಾರಿ ಪ್ರೋಟೀನ್ ಆಹಾರವನ್ನು ತ್ಯಜಿಸುವುದರಿಂದ ಅವುಗಳಿಂದ ದೊರೆಯುವ ಪ್ರೋಟೀನ್ ಮುಂದೆ ಸರಿದೂಗಿಸಿಕೊಳ್ಳುವುದು ಹೇಗೆ ಎಂಬುದು. ಚಿಂತಿಸಬೇಡಿ...
ಮಾಂಸಾಹಾರಿಗಳನ್ನೂ ಸಹ ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳನ್ನಾಗಿ ಮಾಡುವಂತಹ ಆರೋಗ್ಯಕರ ಪಾಕ ವಿಧಾನಗಳು ಇಲ್ಲಿವೆ. ನಿಮ್ಮ ನಿರ್ಧಾರದಿಂದಾಗಿ ಪಾಕಗಳಿಗಾಗಿ ನೀವು ಅಲೆದಾಡುತ್ತಿದ್ದರೆ, ನಿಲ್ಲಿ, ಬಾಣಸಿಗ ನಿಖಿಲ್ ಬೇಂದ್ರೆ ಅವರು ಬಾಯಲ್ಲಿ ನೀರೂರಿಸುವಂತಹ ಆರೋಗ್ಯಕರ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಸಸ್ಯಹಾರಿ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ಇದು ಖಂಡಿತವಾಗಿಯೂ ಸಹಾಯ ಮಾಡುತ್ತವೆ.
1. ಪನೀರ್ ಟಿಕ್ಕಾ ಮಸಾಲಾ - ಹಸಿವು ಹೆಚ್ಚಿಸುವ, ರುಚಿಕರ ಮತ್ತು ಆರೋಗ್ಯಕರ ಪಾಕವಿಧಾನ
ಬೇಕಾಗುವ ಸಾಮಾಗ್ರಿಗಳು:2 ಬ್ಲಾಕ್ ಗಟ್ಟಿಯಾದ ಪನೀರ್, 2 ಚಮಚ ತಂದೂರಿ ಟಿಕ್ಕಾ ಮಸಾಲಾ, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಚಮಚ ಎಣ್ಣೆ, 1 ಕೆಜಿ ಟೊಮೆಟೊ (ಸರಿಸುಮಾರು ಕತ್ತರಿಸಿದ), 100 ಗ್ರಾಂ ಗೋಡಂಬಿ, 20 ಗ್ರಾಂ ಬೆಳ್ಳುಳ್ಳಿ, 30 ಗ್ರಾಂ ಶುಂಠಿ, 3 ಲವಂಗ, 3 ಹಸಿರು ಏಲಕ್ಕಿ, 9 ಕರಿಮೆಣಸು, 500 ಮಿಲಿ ನೀರು, 2 ಈರುಳ್ಳಿ (ಸಣ್ಣದಾಗಿ ಕೊಚ್ಚಿದ), 2 tbsp ಶುಂಠಿ-ಬೆಳ್ಳುಳ್ಳಿ ಪೇಸ್ಟ್. ಇದೆಲ್ಲವನ್ನು ತಯಾರಾಗಿಟ್ಟುಕೊಂಡರೆ ಅರ್ಧ ಗಂಟೆಯಲ್ಲಿ ಪನೀರ್ ಟಿಕ್ಕಾ ಮಸಾಲಾ ತಯಾರು.
ಮ್ಯಾರಿನೇಡ್ ಪನೀರ್ ಟಿಕ್ಕಾ ತಯಾರಿಸುವ ವಿಧಾನ:ಪನೀರ್ ಬ್ಲಾಕ್ಗಳನ್ನು ಸರಿಸುಮಾರು 1-ಇಂಚಿನ ತುಂಡುಗಳಾಗಿ ಕತ್ತರಿಸಿ. ಮ್ಯಾರಿನೇಟ್ ಮಾಡಲು - ತಂದೂರಿ ಟಿಕ್ಕಾ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಎಣ್ಣೆಯನ್ನು ಪ್ರತ್ಯೇಕ ಬಟ್ಟಲಿನಲ್ಲಿ ಮಿಶ್ರಣ ಮಾಡಿ ಮತ್ತು ನಯವಾದ ಸ್ಥಿರತೆಯ ಪೇಸ್ಟ್ ರೂಪಿಸಲು ಚೆನ್ನಾಗಿ ಮಿಶ್ರಣ ಮಾಡಿ. ಪನೀರ್ ಗೆ ಚೆನ್ನಾಗಿ ಮಿಶ್ರಣ ಲೇಪಿಸಿ ಮ್ಯಾರಿನೇಶನ್ ಮಾಡಿ, ಅದನ್ನು 2 ಗಂಟೆಗಳ ಕಾಲ ಶೈತ್ಯೀಕರಣಗೊಳಿಸಿ.
ಒಲೆ ಮೊದಲೇ 200 C ನಷ್ಟು ಕಾಯಿಸಿಡಿ, ರೆಫ್ರಿಜಿರೇಟರ್ನಿಂದ ಮ್ಯಾರಿನೇಡ್ ಮಾಡಿದ ಪನೀರ್ ತೆಗೆದು ಅವುಗಳನ್ನು ಲೋಹದ ಮತ್ತು ಮರದ ಕಡ್ಡಿಗಳಲ್ಲಿ ಓರೆಯಾಗಿ ಹಾಕಿಡಿ. ಬೇಕಿಂಗ್ ಟ್ರೇ ತೆಗೆದುಕೊಂಡು ಮೇಲ್ಮೈ ಚೆನ್ನಾಗಿ ಗ್ರೀಸ್ ಮಾಡಿ. ಸ್ಕೀವರ್ಗಳನ್ನು ಟ್ರೇ ಮೇಲೆ ಇರಿಸಿ ಮತ್ತು ಸುಟ್ಟು ಕ್ರಸ್ಟ್ ರೂಪುಗೊಳ್ಳುವವರೆಗೆ 10 ರಿಂದ 15 ನಿಮಿಷಗಳ ಕಾಲ ಅದನ್ನು ಓವೆನ್ನಲ್ಲೇ ಇಡಿ. ಸುಂದರವಾಗಿ ಸುಟ್ಟ ಪನೀರ್ನ್ನು ಹೊರತೆಗೆಯಿರಿ ಮತ್ತು ಅದನ್ನು ತಣ್ಣಗಾಗಲು ಬಿಡಿ.
ಟಿಕ್ಕಾ ಮಸಾಲಾ ಗ್ರೇವಿ ಮಾಡುವ ವಿಧಾನ: ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಮತ್ತು ಸಂಪೂರ್ಣ ಮಸಾಲೆಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ, ನೀರು ಹಾಕಿ ಪಾತ್ರೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ. ಗೋಡಂಬಿ ಸಂಪೂರ್ಣವಾಗಿ ಮೃದುವಾಗುವವರೆಗೆ ಕುದಿಯಲು ಬಿಡಿ. ಗೋಡಂಬಿ ಸಂಪೂರ್ಣವಾಗಿ ಮೃದುವಾದ ನಂತರ, ಸ್ಟೌವ್ನಿಂದ ಪಾತ್ರೆಯನ್ನು ತೆಗೆದಿರಿಸಿ, ಅದನ್ನು ತಣ್ಣಗಾಗಲು ಬಿಡಿ. ಸಂಪೂರ್ಣವಾಗಿ ತಣ್ಣಗಾಗಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಮಿಶ್ರಣ ಸಂಪೂರ್ಣ ತಣ್ಣಗಾದ ಅದನ್ನು ಅಗತ್ಯವಿದ್ದಷ್ಟು ನೀರು ಸದೇರಿಸಿ ನಯವಾವಾಗಿ ರುಬ್ಬಿ ಮಿಶ್ರಣ ತಯಾರಿಸಿಕೊಳ್ಳಿ. ಅದು ಸಂಪೂರ್ಣವಾಗಿ ಮಿಶ್ರಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ಸವಿಯಲು ಅಹಿತಕರವಾಗಬಹುದು.
ಪನೀರ್ ಟಿಕ್ಕಾ ಮಸಾಲಾ ತಯಾರಿ ವಿಧಾನ:ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ನೀರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಪೇಸ್ಟ್ ಸೇರಿಸಿದ ನಂತರ ಅದು ಬೇಯುವವರೆಗೆ ಎರಡು ನಿಮಿಷಗಳ ಕಾಲ ಕೈಯ್ಯಾಡಿಸುತ್ತಲೇ ಇರಿ. ಪೇಸ್ಟ್ನ ಹಸಿ ವಾಸನೆ ಹೋಗಿ ಬೆಂದಿದೆ ಎಂದಾಗ ತಂದೂರಿ ಟಿಕ್ಕಾ ಮಸಾಲವನ್ನು ಸೇರಿಸಿ, 1-2 ನಿಮಿಷಗಳ ಕಾಲ ಬೆರೆಸಿ, ಮತ್ತು ಮಸಾಲೆಯ ರುಚಿಕರವಾದ ಪರಿಮಳ ಘಮ್ಮೆನ್ನುತ್ತದೆ.
ಆಗ ಮಿಶ್ರಿತ ಗ್ರೇವಿಯನ್ನು ಸೇರಿಸಿ ಮತ್ತು ಆ ಸಾಸ್ನಿಂದ್ ಎಣ್ಣೆ ಹೊರಹೋಗುವವರೆಗೆ 10 ರಿಂದ 15 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಕೈಯ್ಯಾಡಿಸುತ್ತಾ ಇರಿ. ಗ್ರೇವಿ ದಪ್ಪವಾಗಿದ್ದರೆ, ಸ್ವಲ್ಪ ನೀರನ್ನು ಸೇರಿಸಿ ಮತ್ತು ನೀರು ಕುದಿಯುವವರೆಗೆ ಬೇಯಿಸಬಹುದು. ಪಾಕ ಬೆಂದಿದೆಯೇ ಎಂದು ರುಚಿ ನೋಡಿ ತಿಳಿದುಕೊಳ್ಳಿ. ಬೆಂದಿಲ್ಲ ಎಂದರೆ ಮತ್ತೆ 5 ನಿಮಿಷಗಳ ಕಾಲ ಕುದಿಯಲು ಬಿಡಿ. ಗ್ರೇವಿ ಸಂಪೂರ್ಣವಾಗಿ ಬೇಯಿಸಿದ ನಂತರ, ಮ್ಯಾರಿನೇಡ್ ಮಾಡಿಟ್ಟ ಪನೀರ್ ಪೀಸ್ಗಳನ್ನು ಗ್ರೇವಿಗೆ ಸೇರಿಸಿ. ಈ ಪಾಕವನ್ನು ರುಚಿಕರವಾದ ಬಟರ್ ನಾನ್ ಮತ್ತು ಬಿಳಿ ಬಾಸ್ಮತಿ ರೈಸ್ನೊಂದಿಗೆ ಸವಿಯಲು ರುಚಿಯಾಗಿರುತ್ತದೆ.
ದೊರೆಯುವ ಪೌಷ್ಠಿಕಾಂಶ: 200 ಗ್ರಾಂನಷ್ಟು ಈ ಆಹಾರದಿಂದ, 294 ಕೆ.ಕೆ.ಎಲ್ ಕ್ಯಾಲೋರಿಗಳು, 27 ಗ್ರಾಂ ಕಾರ್ಬೋಹೈಡ್ರೇಟ್ಸ್, 8 ಗ್ರಾಂ ಪ್ರೋಟೀನ್, 19 ಗ್ರಾಂ ಕೊಬ್ಬು, 3 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, 4 ಗ್ರಾಂ ಪಾಲ್ಯುನ್ಸ್ಟ್ಯಾಚ್ಯುರೇಟೆಡ್ ಕೊಬ್ಬು, 10 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬು, 1 ಗ್ರಾಂ ಟ್ರಾನ್ಸ್ ಕೊಬ್ಬು, 90 ಸೋಡಿಯಂ, 30 ಗ್ರಾಂ ಪೊಟಾಸ್ಸಿಯಂ, 6 ಗ್ರಾಂ ಫೈಬರ್, 11 ಗ್ರಾಂ ಸಕ್ಕರೆ, 2086 ಐಯು ವಿಟಮಿನ್ ಎ, 41 ಮಿಗ್ರಾಂ ವಿಟಮಿನ್ ಸಿ, 69 ಮಿಗ್ರಾಂ ಕ್ಯಾಲ್ಸಿಯಂ, 3 ಮಿಗ್ರಾಂ ಕಬ್ಬಿಣಾಂಶ ನಮ್ಮ ಪಾಲಾಗುತ್ತದೆ.
ಗರಿಗರಿಯಾದ ಹೂಕೋಸು ವಿಂಗ್ಸ್ - ಕೊರಿಯನ್ BBQ ಸಾಸ್‌ನಲ್ಲಿ ಅದ್ದಿದ ಸಂಪೂರ್ಣ ಬೆಂದ ಹೂಕೋಸು ಸವಿ: