ಸುರಪುರ (ಯಾದಗಿರಿ):ಕೊರೊನಾ ವೈರಸ್ ತಗುಲಿದ ದಂಪತಿ ಮನೆ ಇರುವ ಆಸರ ಮೊಹಲ್ಲಾದ ಜನರಿಗೆ ಪಕ್ಕದ ಏರಿಯಾದವರು ದಿಗ್ಬಂಧನ ಹಾಕಿದ್ದಾರೆ.
ಯಾದಗಿರಿ: ಅಹಮದಾಬಾದ್ನಿಂದ ಬಂದ ದಂಪತಿಗೆ ಕೊರೊನಾ - couple from Ahmedabad
ಯಾದಗಿರಿಯ ಸುರಪುರ ನಗರದ ಆಸರ ಮೊಹಲ್ಲಾದ ದಂಪತಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ದಂಪತಿ ಇರುವ ಆಸರ ಮೊಹಲ್ಲಾ ಕಾಲೋನಿ ಜನ ಪಕ್ಕದ ಓಣಿಗಳಿಗೆ ಬಾರದಂತೆ ದಿಗ್ಬಂಧನ ಹಾಕಲಾಗಿದೆ.
ಕೊರೊನಾ ಪಾಸಿಟಿವ್
ಈಗಾಗಲೇ ಗ್ರೀನ್ ಝೋನ್ ಇದ್ದ ಸುರಪುರ ನಗರದಲ್ಲಿ ಇಂದು ಅಹಮದಾಬಾದ್ಗೆ ಹೋಗಿ ಬಂದ ದಂಪತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಕೊರೊನಾ ಸೋಂಕಿನ ದಂಪತಿ ಇರುವ ಆಸರ ಮೊಹಲ್ಲಾದ ಜನರು ಪಕ್ಕದ ಓಣಿಗಳಿಗೆ ಹೋಗದಂತೆ ತಡೆಯುವ ಪ್ರಯತ್ನ ಮಾಡಲಾಗಿದೆ.
ಆಸರ ಮೊಹಲ್ಲಾದ ಪಕ್ಕದಲ್ಲಿರುವ ಕಬಾಡಗೇರಾ ಹುದ್ದಾರ ಓಣಿ, ಭಾವಗಳ ಓಣಿ ಹೀಗೆ ಅಕ್ಕಪಕ್ಕದ ಏರಿಯಾಗಳಿಗೆ ಅಲ್ಲಿಯ ಜನರು ಬಾರದಂತೆ ತಡೆಯಲು ಮುಳ್ಳು ಬೇಲಿಗಳ ದಿಗ್ಬಂಧನ ಹಾಕಿದ್ದಾರೆ.