ಯಾದಗಿರಿ:ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಸಮೀಪದ ರಾಜನಕೋಳೂರು ಬಳಿಯ ಕೃಷ್ಣಾ ಎಡದಂಡೆ ಕಾಲುವೆ ಬಳಿ ಕಾಲುವೆಯ ಸೇತುವೆಗೆ ಕಾರು ಡಿಕ್ಕಿ ಹೊಡೆದು ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಕೃಷ್ಣಾ ಎಡದಂಡೆ ಕಾಲುವೆಯಲ್ಲಿ ಬರುತ್ತಿರುವಾಗ ಡಿವೈಡರ್‌ಗೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಬಲಶೆಟ್ಟಿಹಾಳ ಗ್ರಾಮದಿಂದ ನಾರಾಯಣಪುರ ಗ್ರಾಮದ ಕಡೆಗೆ ಕಾರು ಪ್ರಯಾಣಿಸುತ್ತಿದ್ದ ವೇಳೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಮಲ್ಲಿಕಾರ್ಜುನ ಮಡಿವಾಳ (35) ಮತ್ತು ಪರಸಪ್ಪ ಚಲವಾದಿ (32) ಎಂಬುವರು ಮೃತಪಟ್ಟಿದ್ದಾರೆ.