ಸುರಪುರ:ತಾಲೂಕಿನ ಕವಡಿಮಟ್ಟಿ ಬಳಿಯಲ್ಲಿ ಮುರಂ ತುಂಬಿದ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಟ್ರ್ಯಾಕ್ಟರ್ ಪಲ್ಟಿ: ಸಾವನ್ನಪ್ಪಿದ ಚಾಲಕ... - surapur Tractor accident
ಮುರಂ ತುಂಬಿದ ಟ್ರ್ಯಾಕ್ಟರ್ ಒಂದು ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಸುರಪುರ ತಾಲೂಕಿನ ಕವಡಿಮಟ್ಟಿ ಬಳಿ ನಡೆದಿದೆ.
ಇಂದು ನಿಂಗಪ್ಪ ಹನುಮಂತ ಕೊಂಗಂಡಿ ಎಂಬುವವರು ಟ್ರ್ಯಾಕ್ಟರಿನಲ್ಲಿ ಮುರಂ ತುಂಬಿಕೊಂಡು ದಿಬ್ಬದಂತಹ ರಸ್ತೆಯನ್ನು ಹತ್ತಿಸುವ ಸಮಯದಲ್ಲಿ ಟ್ರ್ಯಾಕ್ಟರ್ ಇಂಜಿನ್ ಸಮೇತ ಮೇಲೆ ಎದ್ದು ಪಲ್ಟಿಯಾಗಿದೆ. ಮೊದಲು ಇಂಜಿನ್ ಸ್ವಲ್ಪ ಮೇಲೇಳುವಾಗಲೇ ಟ್ರ್ಯಾಕ್ಟರ್ ನಿಲ್ಲಿಸದೆ ಹಾಗೇ ಓಡಿಸಿದ ಪರಿಣಾಮವಾಗಿ ಇಡೀ ಇಂಜಿನ್ ಮೇಲೆದ್ದು ಹಿಂದಕ್ಕೆ ಬಿದ್ದ ಪರಿಣಾಮ, ಟ್ರ್ಯಾಕ್ಟರ್ ಚಾಲಕನಾಗಿದ್ದ ನಿಂಗಪ್ಪ ಹನುಮಂತ ಕೊಂಗಂಡಿ ಎಂಬುವವನು ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಸುರಪುರ ಠಾಣೆ ಇನ್ಸ್ಪೆಕ್ಟರ್ ಎಸ್.ಎಮ್.ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಸುರಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಟ್ರ್ಯಾಕ್ಟರ್ ಚಾಲಕನ ನಿಧನದಿಂದಾಗಿ ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.