ಕರ್ನಾಟಕ

karnataka

ETV Bharat / state

ಪ್ರತಿ ಗ್ರಾಮದಲ್ಲಿ ರುದ್ರಭೂಮಿ ಇರುವುದು ಕಡ್ಡಾಯ: ಸಚಿವ ಆರ್. ಅಶೋಕ್​

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಕೇವಲ ಅರ್ಹರಿಗೆ ಮಾತ್ರ ಸರ್ಕಾರದಿಂದ ನೀಡಲಾಗುವ ಪಿಂಚಣಿ ಸೌಲಭ್ಯ ದೊರೆಯಬೇಕು. ಅದಕ್ಕೆ ಎಲ್ಲಾ ಪಿಂಚಣಿದಾರರಿಗೆ ಆಧಾರ್​ ಲಿಂಕ್ ಮಾಡಲೇಬೇಕು. ಹಾಗೆಯೇ ರುದ್ರಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲು ಸಚಿವರಾದ ಆರ್. ಅಶೋಕ್ ಸೂಚನೆ ನೀಡಿದ್ದಾರೆ.

ಪ್ರಗತಿ ಪರಿಶೀಲನಾ ಸಭೆ
ಪ್ರಗತಿ ಪರಿಶೀಲನಾ ಸಭೆ

By

Published : Aug 26, 2020, 10:49 PM IST

ಯಾದಗಿರಿ: ರುದ್ರಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿ, ಲಭ್ಯವಿಲ್ಲದಿದ್ದರೆ ಖಾಸಗಿಯಾಗಿ ಖರೀದಿಸಿ ನಿರ್ಮಿಸುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಕಂದಾಯ ಹಾಗೂ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಅಶೋಕ್ ಅವರು ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನೆರೆ ಹಾನಿ ಪರಿಹಾರ ಹಾಗೂ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ಗುರುಮಿಠಕಲ್, ವಡಿಗೇರಾ ಹಾಗೂ ಹುಣಸಗಿ ತಾಲೂಕುಗಳ ಎಲ್ಲಾ ಗ್ರಾಮಗಳಲ್ಲಿಯೂ ರುದ್ರಭೂಮಿ ಲಭ್ಯವಿರಬೇಕು. ಸಶ್ಮಾನ ಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯು ಗುರುತಿಸಬೇಕು. ಎ ಅಥವಾ ಬಿ ಕರಾಬು ಸೇರಿದಂತೆ ಸರ್ಕಾರಿ ಒಡೆತನದ ಭೂಮಿಗಳನ್ನು ಆದ್ಯತೆ ಮೇರೆಗೆ ಕನಿಷ್ಠ ಒಂದು ಎಕರೆ ಭೂಮಿಯನ್ನು ಪತ್ತೆ ಹಚ್ಚಬೇಕು. ಖಾಸಗಿಯಾಗಿ ಖರೀದಿಸಿ, ರುದ್ರಭೂಮಿಯನ್ನು ನಿರ್ಮಿಸಿಕೊಡಬೇಕು, ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲೂ ಕಡ್ಡಾಯವಾಗಿ ಸ್ಮಶಾನ ಭೂಮಿ ಇರಲೇಬೇಕು. ಅಲ್ಲಿ ಯಾವುದೇ ಜಾತಿ ಪಂಥಗಳ ಬೇಧಭಾವವಿರಬಾರದು. ಒಟ್ಟಾರೆ ಅದು ಸಾರ್ವಜನಿಕವಾಗಿ ಬಳಕೆಯಾಗಬೇಕು ಎಂದು ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆ

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಕೇವಲ ಅರ್ಹರಿಗೆ ಮಾತ್ರ ಸರ್ಕಾರದಿಂದ ನೀಡಲಾಗುವ ಪಿಂಚಣಿ ಸೌಲಭ್ಯ ದೊರೆಯಬೇಕು. ಅದಕ್ಕೆ ಎಲ್ಲಾ ಪಿಂಚಣಿದಾರರಿಗೆ ಆಧಾರ್​ ಲಿಂಕ್ ಮಾಡಲೇಬೇಕು. ಜಿಲ್ಲೆಯಲ್ಲಿ ಆಧಾರ್​ ಲಿಂಕ್ ಪ್ರಮಾಣ ಹೆಚ್ಚಿಸುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು. ಇದರಿಂದಾಗಿ ಬೋಗಸ್ ಪ್ರಕರಣಗಳನ್ನು ಪತ್ತೆಹಚ್ಚಿ ಅವುಗಳನ್ನು ತಡೆಗಟ್ಟ ಬಹುದಾಗಿದೆ ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತು ದೊರೆಯುವಂತೆ ಮಾಡಲು ಸಾಧ್ಯವಾಗಲಿದೆ ಎಂದರು.

ಕಳೆದ ಸಾಲಿಗಿಂತಲೂ ಈ ಬಾರಿ ಪ್ರವಾಹದ ಮಟ್ಟ ಕಡಿಮೆಯಾಗಿದೆ. ಆದರೆ ಮನೆ, ಬೆಳೆ ಹಾನಿಯಾದವರಿಗೆ ಪರಿಹಾರ ಕೊಡಲು ಕಂದಾಯ ಇಲಾಖೆಯವರು ಶ್ರಮವಹಿಸಬೇಕು. ಪರಿಹಾರ ನೀಡಿದ ಮೊತ್ತ ಅರ್ಹ ಫಲಾನುಭವಿಗಳಿಗೆ ದೊರೆಯಬೇಕು. ಇಲ್ಲಿ ಯಾವುದೇ ರೀತಿಯ ಅವ್ಯವಹಾರಕ್ಕೆ ಅವಕಾಶ ಕೊಡಬಾರದು. ಅದೇ ರೀತಿ ಕೋವಿಡ್-19 ಸೋಂಕಿನ ಸಂದರ್ಭದಲ್ಲಿ ಔಷಧ ಉಪಕರಣಗಳು, ವೈದ್ಯಕೀಯ ವಸ್ತುಗಳ ಖರೀದಿಯಲ್ಲಿ ಅವ್ಯವಹಾರ ಕಂಡುಬರಬಾರದು, ಒಂದು ವೇಳೆ ಕಂಡುಬಂದಲ್ಲಿ ಸೂಕ್ತ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಪ್ರವಾಹದಿಂದ ಹಾನಿಗೀಡಾದವರಿಗೆ ಪರಿಹಾರ ಮೊತ್ತವನ್ನು ಪಾವತಿಸಬೇಕು. ಹಾನಿಯಾದ ಮನೆಗಳ ಗುರುತಿಸುವಿಕೆಯಲ್ಲಿ ಬಡವ, ಶ್ರೀಮಂತನೆಂಬ ಬೇಧವಿರಬಾರದು. ಮುಂದಿನ ತಿಂಗಳು ನಡೆಯುವ ಅಧಿವೇಶನದೊಳಗೆ ಪ್ರವಾಹದಿಂದ ಹಾನಿಗೀಡಾದ ಮನೆಗಳಲ್ಲಿ ಏಷ್ಟು ಮನೆ ನಿರ್ಮಿಸಲಾಗಿದೆ, ಬಾಕಿ ಉಳಿದ ಮನೆಗಳೆಷ್ಟು ಎಂಬ ವಿವರವನ್ನು ಸಲ್ಲಿಸಬೇಕು ಎಂದು ಸೂಚಿಸಿದರು.

ABOUT THE AUTHOR

...view details