ಯಾದಗಿರಿ:ಹಿಜಾಬ್ ತೆಗೆಯಲು ನಿರಾಕರಿಸಿ ಇಂದು ನಡೆಯುತ್ತಿದ್ದ ಪರೀಕ್ಷೆ ಬಹಿಷ್ಕರಿಸಿ 6 ಜನ ವಿದ್ಯಾರ್ಥಿಗಳು ಮನೆಗೆ ವಾಪಸ್ ಆದ ಘಟನೆ ನಗರದ ಸರ್ಕಾರಿ ಬಾಲಕಿಯರ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ನಡೆದಿದೆ.
ಹಿಜಾಬ್ ತೆಗೆಯಲು ನಿರಾಕರಣೆ: ಪಿಯು ಪರೀಕ್ಷೆ ಬಹಿಷ್ಕರಿಸಿ ಹೊರನಡೆದ ವಿದ್ಯಾರ್ಥಿನಿಯರು
ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ ಎಂದು ಹೇಳಿದ್ದರೂ ಅದನ್ನು ನಿರಾಕರಿಸಿ ಹಿಜಾಬ್ಗಾಗಿ ವಿದ್ಯಾರ್ಥಿಗಳು ಪಟ್ಟು ಹಿಡಿದ ಘಟನೆ ಯಾದಗಿರಿಯ ಸರ್ಕಾರಿ ಬಾಲಕಿಯರ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ ನಡೆದಿದೆ.
ಸರ್ಕಾರಿ ಬಾಲಕಿಯರ ಕಾಲೇಜು
ಪಿಯುಸಿ ಕಲಾ ವಿಭಾಗದ ಅರ್ಥಶಾಸ್ತ್ರ ವಿಷಯ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ ಎಂದು ಹೇಳಿದ್ದರೂ ಅದನ್ನು ನಿರಾಕರಿಸಿ ಹಿಜಾಬ್ಗಾಗಿ ಪಟ್ಟು ಹಿಡಿದ ದೃಶ್ಯ ಕಂಡು ಬಂತು. ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿನಿಯರು ಇದರಿಂದಾಗಿ ಪರೀಕ್ಷೆ ಬರೆಯದೇ ಹಿಂತಿರುಗಿದ್ದಾರೆ. ಈ ಘಟನೆ ಬಳಿಕ ಪರೀಕ್ಷೆ ಸುಸೂತ್ರವಾಗಿ ಜರುಗಿದೆ.
ಓದಿ:ಪ್ರಿಯಾಂಕ್ ಖರ್ಗೆಗೆ ನೋಟಿಸ್ ; ಸರ್ಕಾರಕ್ಕೆ ಡಿ. ಕೆ ಶಿವಕುಮಾರ್ ತರಾಟೆ