ಯಾದಗಿರಿ:ಭೀಕರ ಬಸ್ ಅಪಘಾತದಿಂದ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಬಸ್ ಡಿಪೋ ಮ್ಯಾನೇಜರ್‌ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಕ್ಷದಿಂದ ಅಧಿಕಾರಿಗಳಿಗೆ ಹಿಗ್ಗಾಮುಗ್ಗ ತರಾಟೆ.. - ಯಾದಗಿರಿ
ಭೀಕರ ಬಸ್ ಅಪಘಾತದಿಂದ ಸಾವು ಸಂಭವಿಸಿದ ಹಿನ್ನೆಲೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಬಸ್ ಡಿಪೋ ಮ್ಯಾನೇಜರ್‌ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಶಹಾಪುರ ಘಟಕದ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ಗೆ ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು ಬಸ್ ಪಲ್ಟಿಯಾಗಲು ಕಾರಣ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಳೆಯ ಬಸ್ ಹಾಗೂ ರಿಪೇರಿಗೆ ಬಂದ ಬಸ್ಗಳನ್ನು ಚಾಲಕರಿಗೆ ನೀಡಿ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದೀರಿ ಎಂದು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳಿಗೆ ಕಾರ್ಯಕರ್ತರು ಛೀಮಾರಿ ಹಾಕಿದ್ದಾರೆ.
ಅಲ್ಲದೆ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ನೋಡಲು ಬಂದ ಡಿವಿಜನಲ್ ಟ್ರಾಫಿಕ್ ಇನ್ಸ್ಪೆಕ್ಟರ್ ಬಳಿಯೂ ತಮ್ಮ ಆಕ್ರೋಶವನ್ನು ವ್ಯಕಪಡಿಸಿದ್ದಾರೆ. ಅಲ್ಲದೆ ಹಳೆ ಬಸ್ ಓಡಿಸಿ ಅಪಘಾತಕ್ಕೆ ಕಾರಣರಾದವರೇ ಪೂರ್ತಿ ವೆಚ್ಚಭರಿಸಬೇಕುಎಂದು ತರಾಟೆ ತೆಗೆದುಕೊಂಡಿದ್ದಾರೆ.