ಕರ್ನಾಟಕ

karnataka

ETV Bharat / state

ಶಾಸಕ ರಾಜುಗೌಡಗೆ ಸಚಿವ ಸ್ಥಾನ ನೀಡಿ... ಸಿಎಂಗೆ ಯಾದಗಿರಿ ಬಿಜೆಪಿ ಯುವ ಮೋರ್ಚಾ ಮನವಿ - ಶಾಸಕ ರಾಜುಗೌಡ

ಶಾಸಕ ರಾಜುಗೌಡಗೆ ಬಿಎಸ್​ವೈ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಯಾದಗಿರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.

ಯಾದಗಿರಿ ಬಿಜೆಪಿ ಕಾರ್ಯಕರ್ತರ ಮನವಿ!

By

Published : Jul 30, 2019, 3:21 AM IST

ಯಾದಗಿರಿ:ಹೈದರಾಬಾದ್​ ಕರ್ನಾಟಕ ಭಾಗದ ಜನಪ್ರಿಯ ಶಾಸಕ ರಾಜುಗೌಡಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.

ಯಾದಗಿರಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಚಂದ್ರಕಾಂತ ಸುಬೇದಾರ್ ನೇತೃತ್ವದಲ್ಲಿ ಬಿಎಸ್​ವೈಗೆ ಮನವಿ ಸಲ್ಲಿಸಿ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜುಗೌಡರಿಗೆ ಸಚಿವ ಸ್ಥಾನವನ್ನು ನೀಡುವಂತೆ ಆಗ್ರಹಿಸಲಾಯ್ತು.

ಬಿಎಸ್​ವೈಗೆ ಯಾದಗಿರಿ ಬಿಜೆಪಿ ಕಾರ್ಯಕರ್ತರ ಮನವಿ

ರಾಜುಗೌಡ ಹೈದರಾಬಾದ್​ ಕರ್ನಾಟಕ ಭಾಗದಲ್ಲಿ ಜನಪ್ರಿಯ ಶಾಸಕರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದ ಅಮರೇಶ ನಾಯಕರನ್ನು ಗೆಲ್ಲಿಸುವಲ್ಲಿ ತುಂಬಾ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದರು. ಅಲ್ಲದೆ ತಮ್ಮ ಸುರಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವರಿಕೆ ಮಾಡಿದರು.

ABOUT THE AUTHOR

...view details