ಕರ್ನಾಟಕ

karnataka

ETV Bharat / state

ಮಕ್ಕಳ ಸ್ವಾಬ್​ ಮಾದರಿ ಸಂಗ್ರಹಣೆಗೆ ಪೋಷಕರ ತೀವ್ರ ವಿರೋಧ....ಕಾರಣ ? - surapur sslc student news

ಸುರಪುರದ ಆಸರ ಮೊಹಲ್ಲಾ, ದೀವಳಗುಡ್ಡ ಹಾಗೂ ಸಿದ್ದಾಪುರ ಗ್ರಾಮದಲ್ಲಿ ಕೊರೊನಾ ಸೊಂಕಿತರು ಪತ್ತೆಯಾಗಿದ್ದರಿಂದ, ಆರೋಗ್ಯ ಇಲಾಖೆ ಈ ಪ್ರದೇಶಗಳನ್ನು ಕಂಟೈನ್​ಮೆಂಟ್ ವಲಯವೆಂದು ಘೋಷಿಸಿದೆ. ದೀವಳಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಂಟಲು ದ್ರವ ಸಂಗ್ರಹಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಮಕ್ಕಳ ಗಂಟಲು ದ್ರವ ಪರೀಕ್ಷೆಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

surapur
ಮಕ್ಕಳ ಸ್ವಾಬ್​ ಮಾದರಿ ಸಂಗ್ರಹಣೆಗೆ ಪೋಷಕರ ತೀವ್ರ ವಿರೋಧ

By

Published : Jun 23, 2020, 7:31 PM IST

ಸುರಪುರ :ನಗರದ ಕಂಟೈನ್​ಮೆಂಟ್​ ಝೋನ್​ಗಳಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ಪರೀಕ್ಷೆಗೆ ಮುನ್ನ ವರದಿ ಬರುತ್ತದೆಯೋ ಇಲ್ಲವೋ ಎಂಬ ಆತಂಕ ಪೋಷಕರಲ್ಲಿ ಎದುರಾಗಿದೆ.

ನಗರದ ಆಸರ ಮೊಹಲ್ಲಾ, ದೀವಳಗುಡ್ಡ ಹಾಗೂ ಸಿದ್ದಾಪುರ ಗ್ರಾಮದಲ್ಲಿ ಕೊರೊನಾ ಸೊಂಕಿತರು ಪತ್ತೆಯಾಗಿದ್ದರಿಂದ, ಆರೋಗ್ಯ ಇಲಾಖೆ ಈ ಪ್ರದೇಶಗಳನ್ನು ಕಂಟೈನ್​ಮೆಂಟ್ ವಲಯವೆಂದು ಘೋಷಿಸಿದೆ. ದೀವಳಗುಡ್ಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಂಟಲು ದ್ರವ ಸಂಗ್ರಹಣೆಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಮಕ್ಕಳ ಗಂಟಲು ದ್ರವ ಪರೀಕ್ಷೆಗೆ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ಮಕ್ಕಳ ಸ್ವಾಬ್​ ಮಾದರಿ ಸಂಗ್ರಹಣೆಗೆ ಪೋಷಕರ ತೀವ್ರ ವಿರೋಧ

ಇದುವರೆಗೆ ಅನೇಕ ಜನರ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಂಡು ಹೋಗಿ ವಾರವಾದರೂ ವರದಿ ಬಂದಿಲ್ಲ, ಈಗ ನಮ್ಮ ಮಕ್ಕಳ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಮ್ಮ ಮಕ್ಕಳ ಪರೀಕ್ಷೆಗೆ ಇನ್ನೆರಡೇ ದಿನ ಭಾಕಿ ಉಳಿದಿದೆ‌. ಈ ಎರಡು ದಿನಗಳಲ್ಲಿ ಈ ಸ್ವಾಬ್ ಟೆಸ್ಟ್‌ನ ವರದಿ ಬರಲು ಹೇಗೆ ಸಾಧ್ಯ. ಒಂದು ವೇಳೆ ವರದಿ ಬಾರದಿದ್ದಲ್ಲಿ ಯಾವ ಮಗುವಿಗೆ ಪಾಸಿಟಿವ್ ಇದೆ, ಯಾವ ಮಗುವಿಗೆ ನೆಗೆಟಿವ್ ಇದೆ ಎಂದು ಹೇಗೆ ತಿಳಿಯುವುದು, ಇದರಿಂದ ಮಕ್ಕಳಿಗೂ ಮತ್ತು ನಮಗೂ ಆತಂಕವಾಗಿದೆ. ಆದ್ದರಿಂದ ನಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಲು ಭಯವಾಗುತ್ತಿದೆ ಎಂದು ಪೋಷಕರು ತಮ್ಮ ನೋವು ತೋಡಿಕೊಂಡರು.

ಪೋಷಕರ ಭಯವನ್ನು ಅರಿತ ಡಾ. ಓಂ ಪ್ರಕಾಶ್ ಅಂಬುರೆ, ಎಲ್ಲಾ ಮಕ್ಕಳ ಗಂಟಲು ದ್ರವ ಪರೀಕ್ಷೆ ಒಂದು ದಿನದ ಒಳಗಾಗಿ ಬರಲಿದೆ ಎಂದು ಭರವಸೆ ನೀಡಿದರು.

ದೀವಳಗುಡ್ಡದ 30, ಆಸರ ಮೊಹಲ್ಲಾದ 7, ಸಿದ್ದಾಪುರದ 5 ಹಾಗೂ ಗೋನಾಲ ಎಸ್.ಡಿ ಗ್ರಾಮದ 3 ಮಕ್ಕಳ ಸ್ಲಾಬ್​ನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details