ಯಾದಗಿರಿ :ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪ್ರಯತ್ನ ನಡೆಸಿದ್ದರೆ, ಕೆಲವೆಡೆ ಜನರಿಂದ ಈ ಕೋವಿಡ್ ಲಸಿಕಾ ಅಭಿಯಾನಕ್ಕೆ ಹಿನ್ನಡೆ ಆಗ್ತಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಪಾರಾಗಲು ವೃದ್ಧಯೋರ್ವರು ಮೈಮೇಲೆ ದೇವರು ಬಂದಿದೆ ಎಂದು ಹೇಳಿ ಆರೋಗ್ಯ ಸಿಬ್ಬಂದಿ ಎದುರು ವಿಚಿತ್ರವಾಗಿ ವರ್ತಿಸಿದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಹುಲಕಲ್ ಗ್ರಾಮದಲ್ಲಿ ನಡೆದಿದೆ.
ಹುಲಕಲ್ ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲು ವ್ಯಕ್ತಿಯೊಬ್ಬರ ಬಳಿ ಹೋಗಿದ್ದರು. ಈ ವೇಳೆ ಆತ ತನ್ನ ಮೈಮೇಲೆ ದೇವರು ಬಂದಿದೆ. ದೇವರಿಗೆ ಲಸಿಕೆ ಹಾಕುವುದು ಸರಿಯಲ್ಲ ಎಂಬುದಾಗಿ ಕೂಗಾಡುತ್ತಾ ವಿಚಿತ್ರವಾಗಿ ವರ್ತಿಸಿದ್ದಾರೆ. ಇದರಿಂದ ಭಯಗೊಂಡು ಆರೋಗ್ಯ ಸಿಬ್ಬಂದಿ ಅಲ್ಲಿಂದ ವಾಪಸ್ ಆಗಿದ್ದಾರೆ.