ಕರ್ನಾಟಕ

karnataka

ETV Bharat / state

ತೆಲಂಗಾಣ ಗಡಿ ಭಾಗದ ಚೆಕ್ ಪೋಸ್ಟ್​​ಗೆ ಅಧಿಕಾರಿಗಳ ತಂಡದ ಭೇಟಿ, ಪರಿಶೀಲನೆ - ಜಿಪಂ ಸಿಇಓ ಶಿಲ್ಪಾ ಶರ್ಮಾ

ಗುರುಮಠಕಲ್ ಸಮೀಪದ ಇಟಕಲ ಗೇಟ್ ತೆಲಂಗಾಣ ಗಡಿಭಾಗದ ಚೆಕ್ ಪೋಸ್ಟ್​​ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು.

gurumatakal
ಇಟಕಲ ಗೇಟ್ ತೆಲಂಗಾಣ ಗಡಿ ಭಾಗದ ಚೆಕ್ ಪೋಸ್ಟ್​​

By

Published : May 12, 2020, 7:44 AM IST

ಗುರುಮಠಕಲ್: ಕೊರೊನಾ ತಡೆಗಟ್ಟುವ ಉದ್ದೇಶದಿಂದ ಯಾದಗಿರಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಸಿ.ಎ ಇಬ್ರಾಹಿಂ ಹಾಗೂ ಜಿಪಂ ಸಿಇಓ ಶಿಲ್ಪಾ ಶರ್ಮಾ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾದಗಿರಿ ಜಿಲ್ಲೆಯ ಗುರುಮಠಕಲ್ ಸಮೀಪದ ಇಟಕಲ ಗೇಟ್, ತೆಲಂಗಾಣ ಗಡಿಭಾಗದ ಚೆಕ್ ಪೋಸ್ಟ್​​ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಚೆಕ್​ ಪೋಸ್ಟ್​​ನಲ್ಲಿ ಎಚ್ಚರವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.

ಕೊರೊನಾ ವೈರಸ್ ದೇಶವ್ಯಾಪಿ ಹರಡುತ್ತಿರುವ ಹಿನ್ನೆಲೆ ಸರ್ಕಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನು ನೇಮಿಸಿ ಜಿಲ್ಲೆಯಲ್ಲಿ‌ನ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳುತ್ತಿದೆ. ಇನ್ನು ನರೇಗಾ ಕೆಲಸ, ಪಡಿತರ, ಮತ್ತು ಜಿಲ್ಲೆಯಲ್ಲಿನ ವಿವಿಧೆಡೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕೊರೊನಾ ತಡೆಗಟ್ಟಲು ಅಧಿಕಾರಿಗಳು ಜಿಲ್ಲೆ ವ್ಯಾಪ್ತಿ ಸಂಚರಿಸಿ ಪರಿಶೀಲನೆ ನಡೆಸಿದರು.

ABOUT THE AUTHOR

...view details