ಸುರಪುರ:ನಗರದಲ್ಲಿ 3 ದಿನಗಳ ಹಿಂದೆ ಜನಿಸಿದ ಗಂಡು ಮಗುವನ್ನು ಅನಾಥವಾಗಿ ಸಾರ್ವಜನಿಕ ಶೌಚಾಲಯ ಬಳಿ ಬಿಟ್ಟು ಹೋಗಿದ್ದು, ಸಾರ್ವಜನಿಕರೊಬ್ಬರು ಕಾಪಾಡಿದ್ದಾರೆ. ಸದ್ಯ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಶಕ್ಕೆ ಪಡೆದಿದೆ.
ವಿಷಯವನ್ನು ಪೊಲೀಸ್ ಅಧಿಕಾರಿಗಳ ಮೂಲಕ ತಿಳಿದ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ನವಜಾತ ಶಿಶುವನ್ನು ವಶಕ್ಕೆ ಪಡೆದು ಯಾದಗಿರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ವಿಷಯ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.