ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ ಕೇಂದ್ರ ಸ್ಥಳಾಂತರಿಸಿ...ಇದು ಮೊಗ್ದಂಪುರ ತಾಂಡಾ ಜನರ ಅಳಲು

ಕೆಲವರು ಕ್ವಾರೆಂಟೈನ್ ಕೇಂದ್ರಕ್ಕೆ ತೆರಳಿ ಊಟ, ಉಪಚಾರ ಮಾಡಿಸುತ್ತಿರುವುದು ಭಯ ಹುಟ್ಟಿಸಿದೆ. ಅಲ್ಲದೇ ಈ ಕೇಂದ್ರದಲ್ಲಿ ಯಾವುದೇ ಭದ್ರತೆಯಿಲ್ಲ ಎಂದು ಆರೋಪಿಸಿ ಕ್ವಾರೆಂಟೈನ್ ಕೇಂದ್ರ ಸ್ಥಳಾಂತರಕ್ಕೆ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.

Mogdumpur Tanda people forced to replace the quarantine center
ಕ್ವಾರಂಟೈನ್​ ಕೇಂದ್ರವನ್ನು ಸ್ಥಳಾಂತರಿಸಿ...ಇದು ಮೊಗ್ದಂಪೂರ ತಾಂಡಾ ಜನರ ಅಳಲು

By

Published : May 25, 2020, 9:31 PM IST

ಗುರುಮಠಕಲ್:ತಾಂಡಾದ ಕ್ವಾರೆಂಟೈನ್ ಕೇಂದ್ರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ಮೊಗ್ದಂಪುರ ತಾಂಡಾದ ಜನರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದಿಂದ ಆಗಮಿಸಿದ 50ಕ್ಕೂ ಹೆಚ್ಚು ಜನರನ್ನು ತಾಂಡಾದ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. 8-10 ದಿನಗಳು ಕಳೆದಿದ್ರೂ ಕೋವಿಡ್​ -19 ಪರೀಕ್ಷೆ ಮಾಡಿಸಿಲ್ಲ. ಈಗಾಗಲೇ ಗ್ರಾಮದಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿದ್ದ 3 ಜನರಿಗೆ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ತಾಂಡಾ ನಿವಾಸಿಗಳಿಗೆ ಮತ್ತಷ್ಟು ಆತಂಕ ತಂದಿದೆ.

ಮೊಗ್ದಂಪೂರ ತಾಂಡಾ ಜನ

ಕೆಲವರು ಕ್ವಾರೆಂಟೈನ್ ಕೇಂದ್ರಕ್ಕೆ ತೆರಳಿ ಊಟ, ಉಪಚಾರ ಮಾಡಿಸುತ್ತಿರುವುದು ಭಯ ಹುಟ್ಟಿಸಿದೆ. ಅಲ್ಲದೇ ಈ ಕೇಂದ್ರದಲ್ಲಿ ಯಾವುದೇ ಭದ್ರತೆಯಿಲ್ಲ ಎಂದು ಆರೋಪಿಸಿ ಕ್ವಾರೆಂಟೈನ್ ಕೇಂದ್ರ ಸ್ಥಳಾಂತರಕ್ಕೆ ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.

ABOUT THE AUTHOR

...view details