ಸುರಪುರ :ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿದ ಕೊರೊನಾ ಭೀತಿಯಿಂದಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆ ಎದುರು ಮುಗಿಬಿದ್ದ ಗ್ರಾಮೀಣ ಜನತೆ.
ಗುಳೆ ಹೋದವರೆಲ್ಲ ಊರುಗಳಿಗೆ ವಾಪಸ್.. ತಪಾಸಣೆಗಾಗಿ ತಾಲೂಕು ಆಸ್ಪತ್ರೆಯಲ್ಲಿ ನೂಕುನುಗ್ಗಲು - ಕೊರೊನಾ ಸೋಂಕಿನ ಭೀತಿ
ಬೇರೆ, ಬೇರೆ ಊರುಗಳಿಗೆ ಗುಳೆ ಹೋಗಿದ್ದ ಕಾರ್ಮಿಕರೆಲ್ಲ ಕೊರೊನಾ ಸೋಂಕಿನ ಭೀತಿಯಿಂದ ತಮ್ಮ ಹಳ್ಳಿಗಳಿಗೆ ವಾಪಸಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡುತ್ತಿರೋದ್ರಿಂದ ಜನಜಂಗುಳು ಏರ್ಪಡುತ್ತಿದೆ.
ತಪಾಸಣೆಗಾಗಿ ನೂಕುನುಗ್ಗಲು
ತಾಲೂಕಿನ ವಿವಿಧ ಗ್ರಾಮಗಳಿಂದ ಮಹಾರಾಷ್ಟ್ರ, ಗೋವಾ ರಾಜಧಾನಿ ಬೆಂಗಳೂರಿಗೆ ಗುಳೆ ಹೋಗಿದ್ದ ಸಾವಿರಾರು ಕಾರ್ಮಿಕರು ಈಗ ವಾಪಸ್ ಗ್ರಾಮಗಳಿಗೆ ಬಂದಿದ್ದಾರೆ. ಕೊರೊನಾ ಸೋಂಕಿನ ತಪಾಸಣೆಗೆಂದು ನಗರ ಆರೋಗ್ಯ ಕೇಂದ್ರಕ್ಕೆ ಒಂದೇ ಬಾರಿ ಸಾವಿರಾರು ಜನ ನುಗ್ಗಿದ್ದರಿಂದ ಕೊಂಚ ಗದ್ದಲ ಏರ್ಪಟ್ಟಿತು.
ವಿವಿಧ ಗ್ರಾಮಗಳಿಂದ ಬಂದಿದ್ದ ಸುಮಾರು 900ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ. ಯಾರಲ್ಲೂ ಕೂಡ ಜ್ವರ ಅಥವಾ ಸೋಂಕಿನ ಲಕ್ಷಣ ಕಾಣಿಸಿಲ್ಲ ಎಂದು ತಾಲೂಕು ಆರೋಗ್ಯ ಅಧಿಕಾರಿ (ಟಿಹೆಚ್‌ಒ) ಡಾ.ಆರ್ ವಿ ನಾಯಕ್ ಸ್ಪಷ್ಟಪಡಿಸಿದರು.