ಕರ್ನಾಟಕ

karnataka

ETV Bharat / state

ಯಾದಗಿರಿ: ಸೋದರ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಿಣಿ - rape on girl

ಬಾಲಕಿ ಮೇಲೆ ಸೋದರ ಮಾವನೇ ಅತ್ಯಾಚಾರವೆಸಗಿರುವ ಘಟನೆ ಹಲವು ತಿಂಗಳ ಹಿಂದೆ ಯಾದಗಿರಿಯಲ್ಲಿ ನಡೆದಿತ್ತು. ಇದೀಗ ಬಾಲಕಿ ಗರ್ಭಿಣಿ ಆಗಿದ್ದಾಳೆ.

yadagiri  rape case
ಯಾದಗಿರಿ ಅತ್ಯಾಚಾರ ಕೇಸ್

By

Published : Jun 26, 2022, 7:07 PM IST

ಯಾದಗಿರಿ: 13 ವರ್ಷದ ಬಾಲಕಿ ಮೇಲೆ ಸೋದರ ಮಾವನೇ(ತಾಯಿಯ ತಮ್ಮ) ಅತ್ಯಾಚಾರವೆಸಗಿರುವ ಘಟನೆ ಹಲವು ತಿಂಗಳ ಬಳಿಕ ಹೊರ ಬಿದ್ದಿದ್ದು, ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಬಾಲಕಿ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ.

ಯಾದಗಿರಿಯ ನಿವಾಸಿಯಾದ ಬಾಲಕಿಯ ತಂದೆ ಸುಮಾರು ಎಂಟು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಹೊಟ್ಟೆಪಾಡಿಗಾಗಿ ದೂರದ ಬೆಂಗಳೂರಿಗೆ ಹೋಗಿ ಕೂಲಿ ಕೆಲಸ ಮಾಡಿ 5 ಹೆಣ್ಣುಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು. ಐವರು ಹೆಣ್ಣು ಮಕ್ಕಳ ಪೈಕಿ ನಾಲ್ಕನೆಯವಳಾದ ಈ ಬಾಲಕಿ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.

ದೂರದ ಬೆಂಗಳೂರಿನಿಂದ ಸಹೋದರಿ (ಅಕ್ಕ), ಮಗಳು ಊರಿಗೆ ಬಂದು ಸಭೆ, ಸಮಾರಂಭ, ಹಬ್ಬಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ಊರಿಗೆ ಬಂದ ವೇಳೆ ಮಾವ ತನ್ನ ಸಂಬಂಧಿಕರ ಮನೆಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರಗೈದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ.

ತನಿಖೆಯನ್ನು ಯಾದಗಿರಿ ಮಹಿಳಾ ಪೋಲಿಸ್ ಠಾಣೆಯ ಇನ್ಸ್​ಪೆಕ್ಟರ್​ಗೆ ವಹಿಸಲಾಗಿದೆ. ಸಾರ್ವಜನಿಕರು ಶಾಲೆಗೆ ಹೋಗುವ ಮಕ್ಕಳ ಮೇಲೆ ನಿಗಾ ಇಡಬೇಕು. ಮಕ್ಕಳ ಮೇಲೆ ಜನರು ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದು ಯಾದಗಿರಿ ಎಸ್ಪಿ ಡಾ. ಸಿ.ಬಿ ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ:ಸಿರಿಯಾ ಹಡಗು ಮುಳುಗಡೆ ಪ್ರಕರಣ.. ತೈಲ ಸೋರಿಕೆ ತಡೆಗೆ ಗುಜರಾತ್​​ನಿಂದ ಬಂದಿದೆ 'ಸಮುದ್ರ ಪಾವಕ್'

ABOUT THE AUTHOR

...view details