ಯಾದಗಿರಿ: ಸ್ವಾರ್ಥ ಬಿಟ್ಟು ಜನರ ಸೇವೆಯಲ್ಲಿ ತೊಡಗಿರುವ ಡಾ. ಸುಬೇದಾರ ಅವರು ಮೂಲತಃ ವೈದ್ಯರಾಗಿದ್ದರೂ ಸಮಾಜ ಸೇವೆ ಮೈಗೂಡಿಸಿಗೊಂಡಿದ್ದು, ನಿಜಕ್ಕೂ ಅವರ ಕಾರ್ಯ ಪ್ರತಿಯೊಬ್ಬರಿಗೂ ಮಾದರಿ ಎಂದು ಸಂಸದ ರಾಜ ಅಮರೇಶ್ವರ ನಾಯಕ ಹೇಳಿದರು. ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಸ್ವಾತಂತ್ರ್ಯ ಹೋರಾಟಗಾರ ದಿ.ಅಚ್ಚಪ್ಪಗೌಡ ಸುಬೇದಾರ ಟ್ರಸ್ಟ್ ಐದನೇ ವಾರ್ಷಿಕೋತ್ಸವ ಹಿನ್ನೆಲೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಗೋಮಾತೆ ಪೂಜಿಸುವ ಮೂಲಕ ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ವಿಶೇಷವಾಗಿ ಕೊವೀಡ್ ಸಮಯದಲ್ಲಿ ವೈದ್ಯರ ಮಹತ್ವ ತಿಳಿದಿದೆ. ಸುಭೇದಾರ ಅವರು ವೈದ್ಯರಾಗಿ ಜನಪರ ಸೇವೆಗಳನ್ನು ಮಾಡುತ್ತಿದ್ದಾರೆ. ಅಚ್ಚಪ್ಪಗೌಡರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶದ ಜನರ ಹಿತರಕ್ಷಣೆಯಲ್ಲಿ ಸುಬೇದಾರ ಕುಟುಂಬ ಪ್ರಧಾನವಾಗಿದೆ. ದಂಗೆಕೋರರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜೀವ ಪಣಕ್ಕಿಟ್ಟು ಕಾಪಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಕೋಟಿ ನಮನ ತಿಳಿಸಿದರು. ವೈದ್ಯ ವೃತ್ತಿಯಿಂದ ಜನರ ಸೇವೆಗೆ ಸಮರ್ಥವಾಗಿ ಬಳಸಿಕೊಂಡು ಸೇವಾ ಕೈಂಕರ್ಯಗಳನ್ನು ವಿಸ್ತರಿಸಿ ಬಡವರಿಗೆ ಪಾಲಿಗೆ ಬೆಳಕಾಗಿದ್ದಾರೆ ಎಂದು ಡಾ. ಸುಬೇದಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನು ಓದಿ:ಕಾಂಗ್ರೆಸ್ನ ಎಸ್ಸಿ, ಎಸ್ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ?: ಬಿಎಸ್ವೈ
ಇನ್ನು ಸುರಪುರ ಶಾಸಕ ರಾಜೂಗೌಡ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಧಾರಾವಾಹಿ, ಚಲನಚಿತ್ರ, ಪುಸ್ತಕಗಳ ರಚಿಸುವ ಮೂಲಕ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕಿದೆ. ಸೇವೆ ಕಾರ್ಯ ಮುಂದುವರೆಯಲಿ. ವೃತ್ತಿಯಾಗಿ ಬದುಕುವುದು ಬೇಡ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಬದುಕಬೇಕು. ಸುಬೇದಾರ ಕುಟುಂಬ ಹೀಗೆ ನಿರಂತರ ಜನರ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಇದೇ ವೇಳೆ ಶುಭ ಹಾರೈಸಿದರು.