ಕರ್ನಾಟಕ

karnataka

ಕೃಷ್ಣಾನದಿ ಪ್ರವಾಹ.. ಯಾರೂ ಭಯಪಡಬೇಡಿ ಎಂದು ಅಭಯ ನೀಡಿದ ಜಿಲ್ಲಾಧಿಕಾರಿ

By

Published : Aug 3, 2019, 9:44 PM IST

ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು.​ ಗ್ರಾಮಸ್ಥರಿಗೆ ತೊಂದರೆ ಆಗದ ರೀತಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ.

District collector M.Kurmarao

ಯಾದಗಿರಿ:ಕೃಷ್ಣಾನದಿಯ ತಟದಲ್ಲಿರುವ ನಿವಾಸಿಗಳು ಯಾವುದೇ ರೀತಿಯ ಭಯಪಡದೆ ಜೀವನ ನಡೆಸಬಹುದು ಎಂದು​​ ಗ್ರಾಮಸ್ಥರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಅಭಯ ನೀಡಿದ್ದಾರೆ. ನದಿ ಪಾತ್ರಗಳ ಸಮೀಪಕ್ಕೆ ಹೋಗಬಾರದು ಎಂದು ಡಂಗುರ ಬಾರಿಸುವ ಮುಖಾಂತರ ಅರಿವು ಮೂಡಿಸಲಾಗುತ್ತಿದ್ದು, ನೀರು ಹರಿಯುವತ್ತ ಯಾರೂ ಸುಳಿಯಬಾರದು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ...ಕೃಷ್ಣಾನದಿಯಲ್ಲಿ ಪ್ರವಾಹ: ಮುಳುಗುವ ಭೀತಿಯಲ್ಲಿ ಛಾಯ ಭಗವತಿ ದೇಗುಲ

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾನದಿಯ ದಡದಲ್ಲಿರುವ ನಿವಾಸಿಗಳು ಭಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ. ಗ್ರಾಮಸ್ಥರು ಧೈರ್ಯದಿಂದ ಇರುವಂತೆ ಧೈರ್ಯ ತುಂಬಿದ್ದಾರೆ.

ಜಿಲ್ಲಾಧಿಕಾರಿ ಎಂ.ಕೂರ್ಮರಾವ್..
ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಹರಿಸುತ್ತಿದ್ದಂತೆ ನದಿ ಪಾತ್ರದಲ್ಲಿರುವ ಕೊಳ್ಲೂರ, ನೀಲಕಂಠರಾಯನ್ ಗಡ್ಡೆ ಸಂಪರ್ಕ ಸೇತುವೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸ್​, ಫೈರ್ ಅಂಡ್ ಸೇಫ್ಟಿ ಇಲಾಖೆ ಸಿಬ್ಬಂದಿ, ಸುರಕ್ಷತಾ ತಂಡಗಳನ್ನು ನಿಯೋಜಿಸಿರುವುದು ಸೇರಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ...ಕೃಷ್ಣಾ ನದಿ ಪ್ರವಾಹ.. ನಡುಗಡ್ಡೆಗಳಂತಾದ ಗ್ರಾಮಗಳು.. ತೀರ ಪ್ರದೇಶದಲ್ಲಿ ತೀವ್ರ ನಿಗಾ!

ABOUT THE AUTHOR

...view details