ಕರ್ನಾಟಕ

karnataka

ETV Bharat / state

ಯಾದಗಿರಿಯಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಜೆಡಿಎಸ್​ ಮುಖಂಡ - ಕೊರೊನಾ ಲಾಕ್​ಡೌನ್​

ಜೆಡಿಎಸ್ ಮುಖಂಡ ಹಣಿಮೆಗೌಡ ಬಿರನಕಲ್ ಅವರ ನೇತೃತ್ವದಲ್ಲಿ 10 ಲಕ್ಷ ಮೌಲ್ಯದ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್​​​ಗಳನ್ನು ವಿತರಣೆ ಮಾಡಲಾಯಿತು.

JDS Leader Hanimegowda distributes food for poor in yadgiri
ಯಾದಗಿರಿಯಲ್ಲಿ ಆಹಾರದ ಕಿಟ್ ವಿತರಿಸಿದ ಜೆಡಿಎಸ್​ ಮುಖಂಡ ಹಣಿಮೆಗೌಡ

By

Published : Apr 14, 2020, 6:55 PM IST

ಯಾದಗಿರಿ:ಮೇ. 3ರವರೆಗೂ ಲಾಕ್​ಡೌನ್ ಮುಂದುವರಿದ ಹಿನ್ನೆಲೆ ಯಾದಗಿರಿ ನಗರದಲ್ಲಿ ಬಡಜನತೆ ಮತ್ತು ನಿರಾಶ್ರಿತರಿಗೆ ಹತ್ತು ದಿನಕ್ಕೆ ಆಗುವಷ್ಟು ಆಹಾರ ಸಾಮಗ್ರಿಳನ್ನು ವಿತರಿಸಲಾಯಿತು.

ಜೆಡಿಎಸ್ ಮುಖಂಡ ಹಣಿಮೆಗೌಡ ಬಿರನಕಲ್ ಅವರ ನೇತೃತ್ವದಲ್ಲಿ 10 ಲಕ್ಷ ಮೌಲ್ಯದ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಆಹಾರ ಪದಾರ್ಥಗಳ ಕಿಟ್​ಗಳನ್ನು ವಿತರಣೆ ಮಾಡಲಾಯಿತು. ಅಂಬೇಡ್ಕರ್ ನಗರ, ವಾಲ್ಮೀಕಿ ನಗರ ಸೇರಿದಂತೆ ಒಟ್ಟು ನಗರದ 31 ವಾರ್ಡ್​​ಗಳಲ್ಲಿ ಬಡವರು, ನಿರ್ಗತಿಕರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್ ನೀಡಲಾಗಿದೆ.

5 ಕೆಜಿ ಅಕ್ಕಿ, ಅರ್ಧ ಕೆಜಿ ಎಣ್ಣೆ, ಇತರ ಅಡುಗೆ ಸಾಮಗ್ರಿಗಳನ್ನು ನೀಡಲಾಗಿದೆ.‌ ಇದರಿಂದ ನಿರ್ಗತಿಕರಿಗೆ ಅನುಕೂಲವಾಗಿದೆ. ಇನ್ನು ಕೆಲ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ದಾನಿಗಳು ಜನರ ಸಂಕಷ್ಟಕ್ಕೆ ನೆರವಾಗುತ್ತಿರುವುದರಿಂದ ಲಾಕ್​​​​ಡೌನ್​​​ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಈ ಮೂಲಕ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ‌.

ABOUT THE AUTHOR

...view details