ಕರ್ನಾಟಕ

karnataka

ETV Bharat / state

ಶಾರ್ಟ್ ಸರ್ಕಿಟ್​​ನಿಂದ ಮನೆಗೆ ಬೆಂಕಿ.. ಮಗಳ ಮದುವೆಗೆ ಕೂಡಿಟ್ಟ ಹಣ, ಒಡವೆ ಭಸ್ಮ - ಯಾದಗಿರಿ ಸುದ್ದಿ

ಸುರಪುರ ತಾಲೂಕಿನ ದೇವಿಕೇರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್​ನಿಂದ ಮನೆಯೊಂದಕ್ಕೆ ಬೆಂಕಿ ಬಿದ್ದು, 8.50 ಲಕ್ಷ ರೂ. ನಗದು, 45 ಗ್ರಾಂ ಬಂಗಾರ ಮತ್ತು ಮನೆಯಲ್ಲಿದ್ದ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ.

fire To Home from an electrical short circuit
ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ..15 ಲಕ್ಷಕ್ಕೂ ಅಧಿಕ ನಷ್ಟ

By

Published : Aug 19, 2020, 8:31 PM IST

Updated : Aug 19, 2020, 11:32 PM IST

ಸುರಪುರ (ಯಾದಗಿರಿ): ತಾಲೂಕಿನ ದೇವಿಕೇರಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್​ನಿಂದ ಮನೆಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ವಿದ್ಯುತ್ ಶಾರ್ಟ್ ಸರ್ಕಿಟ್​​ನಿಂದ ದೇವಿಕೇರಿ ಗ್ರಾಮದ ಇಮಾಮ್‌ ಸಾಬ್ ಎಂಬುವವರ ಮನೆಗೆ ಬೆಂಕಿ ಬಿದ್ದಿದ್ದು, ಮಗಳ ಮದುವೆಗೆಂದು ಸಾಲ ಮಾಡಿ ತಂದಿಡಲಾಗಿದ್ದ 8.50 ಲಕ್ಷ ರೂಪಾಯಿ ನಗದು, 45 ಗ್ರಾಂ ಬಂಗಾರ ಮತ್ತು ಮನೆಯಲ್ಲಿದ್ದ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿಗೆ ಆಹುತಿಯಾದ ವಸ್ತುಗಳ ಒಟ್ಟು ಮೌಲ್ಯ 15 ಲಕ್ಷ ರೂ.ಗಿಂತ ಅಧಿಕ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರದ ಕಾರಣ ಜೀವ ಹಾನಿಯಾಗಿಲ್ಲ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ..15 ಲಕ್ಷಕ್ಕೂ ಅಧಿಕ ನಷ್ಟ

ಸ್ಥಳಕ್ಕೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಲಮಾಡಿ ಕಟ್ಟಿಸಿರುವ ಮನೆ ಕೂಡ ಸುಟ್ಟುಹೋಗಿದೆ. ಮಗಳ ಮದುವೆಗೆಂದು ಸಾಲ ಮಾಡಿ ತಂದ ಹಣ ಹಾಗೂ ಬಂಗಾರ ಸುಟ್ಟುಹೋಗಿದೆ. ಸರ್ಕಾರ ನಮಗೆ ಪರಿಹಾರ ನೀಡಬೇಕೆಂದು ಮನೆಯ ಸದಸ್ಯೆ ಮಹಿಬೂಬಿ ಮನವಿ ಮಾಡಿದ್ದಾರೆ.

Last Updated : Aug 19, 2020, 11:32 PM IST

ABOUT THE AUTHOR

...view details