ಯಾದಗಿರಿ: ಸುರಪುರ ನಗರ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಫೀವರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ವೇಳೆ ತಪಾಸಣೆಗೆಂದು ಬಂದವರು ಸಾಮಾಜಿಕ ಅಂತರ ಕಾಯದಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು.
ಫೀವರ್ ಸೆಂಟರ್‌ಗೆ ಜಿಲ್ಲಾಧಿಕಾರಿ.. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರೋದಕ್ಕೆ ಬೇಸರ..
ಯಾವುದೇ ಸಂಘ-ಸಂಸ್ಥೆಗಳು ಜನರಿಗೆ ಸಿದ್ಧಪಡಿಸಿದ ಆಹಾರ ನೀಡುವುದನ್ನು ನಿರ್ಬಂಧಿಸಿದೆ. ಇನ್ನೂ ಒಂದೇ ದ್ವಾರದಲ್ಲಿ ಒಳಗೆ ಹೋಗಿ ಬರುವುದು ಅಪಾಯಕಾರಿ.
ಫಿವರ್ ಸೆಂಟರ್‌ಗೆ ಜಿಲ್ಲಾಧಿಕಾರಿ ಭೇಟಿ: ಸಾಮಾಜಿಕ ಅಂತರ ಕಾಯದಿರುವುದನ್ನು ಕಂಡು ಬೇಸರ
ತಪಾಸಣೆಗೆ ಬಂದ ಅಧಿಕಾರಿಗಳುಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ನಿಗಾವಹಿಸಬೇಕೆಂದು ಖಡಕ್ ಸೂಚನೆ ನೀಡಿದರು. ಆನಂತರ ಯಾವುದೇ ಕಾರಣಕ್ಕೂ ತಪಾಸಣೆಗೆ ಬಂದವರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹೊರತುಪಡಿಸಿ ಇನ್ನಾರಿಗೂ ಕೂಡ ಅನಾವಶ್ಯಕ ನಿಲ್ಲಲು, ತಿರುಗಾಡಲು ಅವಕಾಶ ಕೊಡಬೇಡಿ ಎಂದರು.
ಇದೇ ವೇಳೆ ಯಾವುದೇ ಸಂಘ-ಸಂಸ್ಥೆಗಳು ಜನರಿಗೆ ಸಿದ್ಧಪಡಿಸಿದ ಆಹಾರ ನೀಡುವುದನ್ನು ನಿರ್ಬಂಧಿಸಿದೆ. ಇನ್ನು ಒಂದೇ ದ್ವಾರದಲ್ಲಿ ಒಳಗೆ ಹೋಗಿ ಬರುವುದು ಅಪಾಯಕಾರಿ. ಹಾಗಾಗಿ ಒಳ ಹೋಗಲು ಮತ್ತು ಹೊರ ಬರಲು ಬೇರೆ ಬೇರೆ ಬಾಗಿಲುಗಳನ್ನು ಬಳಸಿ ಎಂದು ತಿಳಿಸಿದರು.