ಕರ್ನಾಟಕ

karnataka

ETV Bharat / state

ಕೊರೊನಾ ವಿರುದ್ಧ ಪೊಲೀಸ್-ಗೃಹ ರಕ್ಷಕ ದಳದಿಂದ ಜನಜಾಗೃತಿ - Awareness campaign on Corona in the city by the Police Department and the Home Guard

ಇಂದು ಬೆಳಗ್ಗೆ ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಜಾಗೃತಿ ಅಭಿಯಾನ, ನಗರದ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸುತ್ತಾ ಮಹಾತ್ಮಗಾಂಧಿ ವೃತ್ತ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಾಗಿತು. ಈ ವೇಳೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಉಚಿತ ಮಾಸ್ಕ್​​ ವಿತರಿಸಲಾಯಿತು.

Creating awareness towards corona from police and home guards
ಕೊರೊನಾ ವಿರುದ್ಧ ಜಾಗೃತಿಗಿಳಿದ ಪೊಲೀಸ್-ಗೃಹ ರಕ್ಷಕ ದಳ

By

Published : Oct 21, 2020, 5:55 PM IST

ಸುರಪುರ (ಯಾದಗಿರಿ):ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದ ವತಿಯಿಂದ ನಗರದಲ್ಲಿ ಕೊರೊನಾ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು.

ಕೊರೊನಾ ವಿರುದ್ಧ ಜಾಗೃತಿಗಿಳಿದ ಪೊಲೀಸ್-ಗೃಹ ರಕ್ಷಕ ದಳ

ಈ ಸಂದರ್ಭದಲ್ಲಿ ಸುರಪುರ ಉಪವಿಭಾಗದ ಡಿವೈಎಸ್​​​ಪಿ ವೆಂಕಟೇಶ್ ಹುಗಿಬಂಡಿ ಮಾತನಾಡಿ, ಇಂದು ಎಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗಲು ಜನರ ನಿರ್ಲಕ್ಷ್ಯ ಕಾರಣವಾಗಿದೆ. ಮುಂದೆ ಪ್ರತಿಯೊಬ್ಬರೂ ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಆಗಾಗ ಕೈಗಳನ್ನು ತೊಳೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸುರಪುರ ಠಾಣೆಯ ಇನ್ಸ್​​​ಪೆಕ್ಟರ್​ ಎಸ್.ಎಂ.ಪಾಟೀಲ್, ಗೃಹರಕ್ಷಕ ದಳದ ಕಮಾಂಡರ್ ಯಲ್ಲಪ್ಪ ಹುಲಿಕಲ್ ಸೇರಿದಂತೆ ಅನೇಕರು ಇದ್ದರು.

ABOUT THE AUTHOR

...view details