ಸುರಪುರ (ಯಾದಗಿರಿ): ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಒಬ್ಬ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ದೇವತ್ಕಲ್ ಗ್ರಾಮದ ಬಳಿಯ ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದ ಬಳಿಯಲ್ಲಿನ ದೇವಾಪುರ ವಿಜಯಪುರ ಜಿಲ್ಲಾ ಹೆದ್ದಾರಿ ಮಾರ್ಗದಲ್ಲಿ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಟ್ರಾಕ್ಟರ್ ಮತ್ತು ಕಾರ್ ಮಧ್ಯೆ ಅಪಘಾತ ಸಂಭವಿಸಿದ್ದರಿಂದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರು ಯಾವ ಊರಿನಿಂದ ಹೊರಟಿತ್ತು ಮತ್ತು ಮೃತರು ಎಲ್ಲಿಯವರೆಂದು ತಿಳಿದು ಬಂದಿಲ್ಲ. ಆದರೆ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಕಾರಿನಲ್ಲಿ ಒಟ್ಟು ಮೂರು ಜನರಿದ್ದು ಒಬ್ಬನು ಮೃತನಾಗಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕನಿಗೂ ಗಂಭೀರವಾಗಿ ಗಾಯವಾಗಿದ್ದು ಮೂರು ಜನರನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಸುರಪುರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗುತ್ತಿದೆ. ಸ್ಥಳದಲ್ಲಿರುವ ಜನರು ಹೇಳುವ ಪ್ರಕಾರ ಯಾದಗಿರಿ ಸಮೀಪದ ಸೈದಾಪುರ ಗ್ರಾಮದವರೆಂದು ಹೇಳಲಾಗುತ್ತಿದ್ದು , ಪೊಲೀಸರು ಗಾಯಾಳುಗಳಿಂದ ಮಾಹಿತಿ ಪಡೆದ ನಂತರವಷ್ಟೇ ಎಲ್ಲರ ಗುರುತು ಹಾಗೂ ಅಪಘಾತದ ಕಾರಣ ತಿಳಿಯಬೇಕಿದೆ.