ಯಾದಗಿರಿ:ಮೂರು ದಿನಗಳ ಹಿಂದೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.
ಮೂರು ದಿನದ ಹಿಂದೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಶವವಾಗಿ ಪತ್ತೆ..
ಮೂರು ದಿನಗಳ ಹಿಂದೆ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆದಿದೆ.
ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕ..ಇಂದು ಶವವಾಗಿ ಪತ್ತೆ..!
ಮೃತನನ್ನು ಅಗ್ನಿ ಗ್ರಾಮದ ನಿವಾಸಿ ರಮ್ಜಾನ್ (25) ಎಂದು ಗುರುತಿಸಲಾಗಿದೆ. ರಮ್ಜಾನ್ ಕೆಂಭಾವಿ ಗ್ರಾಮದ ಹೊರವಲಯದಲ್ಲಿರುವ ಕಾಲುವೆಯಲ್ಲಿ ಮೂರು ದಿನಗಳ ಹಿಂದೆ ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದು ಕೊಚ್ಚಿ ಹೋಗಿದ್ದ. ಈಗ ಕಾಲುವೆ ಗೇಟ್ನಲ್ಲಿಆತನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.