ಕರ್ನಾಟಕ

karnataka

ETV Bharat / state

ಬೆಕ್ಕಿನಿಂದ ದೇವರ ದೀಪ ಉರುಳಿ ಬಿದ್ದು ಹೊತ್ತಿ ಉರಿದ ಮನೆ! - ಯಾದಗಿರಿ ಅಗ್ನಿ ಅವಗಡ ನ್ಯೂಸ್​

ದೇವರ ಮುಂದಿಟ್ಟ ದೀಪ ಉರುಳಿ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ಸಮಗ್ರಿಗಳು ಬೆಂಕಿಗೆ ಆಹುತಿಯಾದ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಹೊತ್ತಿ ಉರಿದ ಮನೆ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಹೊತ್ತಿ ಉರಿದ ಮನೆ

By

Published : Dec 8, 2019, 7:54 AM IST

ಯಾದಗಿರಿ: ದೇವರ ಮುಂದಿಟ್ಟ ದೀಪ ಉರುಳಿ ಮನೆಗೆ ಬೆಂಕಿ ಹೊತ್ತಿದ ಪರಿಣಾಮ ಮನೆಯಲ್ಲಿದ್ದ ಸಮಗ್ರಿಗಳು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಹೊತ್ತಿ ಉರಿದ ಮನೆ

ಕಮಲಮ್ಮ ಸಾವೂರ ಎಂಬುವವರ ಮನೆಯಲ್ಲಿ ಈ ಘಟನೆ ಜರುಗಿದೆ. ನಿನ್ನೆ ಸಂಜೆ ಮನೆಯಲ್ಲಿನ ದೇವರ ಕೋಣೆಯಲ್ಲಿ ದೀಪ ಹಚ್ಚಿಡಲಾಗಿತ್ತು. ಆ ದೀಪವನ್ನು ಬೆಕ್ಕು ಉರುಳಿಸಿದ ಪರಿಣಾಮ ದೀಪದ ಕಿಡಿ ತಾಗಿ ಬೆಂಕಿ ಮನೆ ತುಂಬಾ ಆವರಿಸಿದೆ. ಸ್ಥಳೀಯರಿಂದ ಬೆಂಕಿ ನಂದಿಸಲಾಗಿದ್ದು, ಮನೆಯಲ್ಲಿದ್ದ ಬಟ್ಟೆ, ದವಸ ಧಾನ್ಯ, 25 ಗ್ರಾಂ ಚಿನ್ನಾಭರಣ ಸಮೇತ ಅಪಾರ ಪ್ರಮಾಣದ ವಸ್ತಗಳು ಭಸ್ಮವಾಗಿವೆ ಎಂದು ಮನೆಯವರು ತಿಳಿಸಿದ್ದಾರೆ.

ಈ ಸಂಬಂಧ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details