ಯಾದಗಿರಿ: ತಾಲೂಕು ಪಂಚಾಯತ್ ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲ್ ಒಡೆದು ಕಲ್ಲುಗಳನ್ನು ಬಿಸಾಡಿ ಹೋಗಿರುವ ಘಟನೆ ಯಾದಗಿರಿ ತಾಲೂಕು ಪಂಚಾಯತ್ನಲ್ಲಿ ನಡೆದಿದೆ.
ತಾ.ಪಂ ಕಚೇರಿಯಲ್ಲಿ ಬಿಯರ್ ಬಾಟಲ್ ಒಡೆದು ಕಲ್ಲು ಬಿಸಾಡಿದ ಕಿಡಿಗೇಡಿಗಳು!
ಯಾದಗಿರಿ ತಾಲೂಕು ಪಂಚಾಯತ್ ಅಧ್ಯಕ್ಷರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಬಿಯರ್ ಬಾಟಲ್ ಒಡೆದು ಕಲ್ಲುಗಳನ್ನು ಬಿಸಾಡಿ ಹೋಗಿರುವ ಘಟನೆ ಯಾದಗಿರಿ ತಾಲೂಕು ಪಂಚಾಯತ್ನಲ್ಲಿ ನಡೆದಿದೆ.
ತಾಲೂಕು ಪಂಚಾಯತ್ ಅಧ್ಯಕ್ಷೆ ಭೀಮವ್ವಾ ಅಚ್ಚೋಲಾ ಅವರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಅಧ್ಯಕ್ಷೆ ಭೀಮವ್ವಾ ಅಚ್ಚೋಲಾ ಮತ್ತು ಸದಸ್ಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಒಂದು ತಿಂಗಳ ಹಿಂದಷ್ಟೇ ಇದೇ ರೀತಿಯ ಘಟನೆ ಜರುಗಿದ್ದು, ಇದು ಎರಡನೇ ಬಾರಿ ನಡೆದ ಪ್ರಕರಣವಾಗಿದೆ.
ಈ ಘಟನೆ ಹಿನ್ನೆಲೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವುದಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ, ಭರವಸೆ ನೀಡಿದ್ದಾರೆ. ಜೊತೆಗೆ ಕಿಡಿಗೇಡಿಗಳ ಪತ್ತೆಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
TAGGED:
yadagir taluk office news