ಕರ್ನಾಟಕ

karnataka

ETV Bharat / state

ಕಲುಷಿತ ‌ನೀರು ಸೇವಿಸಿ ಗುರುಮಠಕಲ್​ನಲ್ಲಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ - Consume contaminated water

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಲ್ಲಿ ಕಲುಷಿತ ‌ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಬಳಲಿದ್ದಾರೆ.

30 more people  unwell
ಕಲುಷಿತ ‌ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ

By

Published : May 9, 2020, 11:59 PM IST

ಗುರುಮಠಕಲ್: ಕಲುಷಿತ ‌ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿಯಲ್ಲಿ ನಡೆದಿದೆ.

ನೀರಿನ‌ ಟ್ಯಾಂಕರ್​​ನಿಂದ ನಿನ್ನೆ ನೀರು ಪೂರೈಕೆ ಮಾಡಲಾಗಿದ್ದು, ಆ ನೀರನ್ನು ಕುಡಿದ 30ಕ್ಕೂ ಹೆಚ್ಚು ಜನರು ವಾಂತಿ ಬೇಧಿಯಿಂದ ಬಳಲಿದ್ದಾರೆ ಎನ್ನಲಾಗಿದೆ.

ಇನ್ನು ಅಸ್ವಸ್ಥರನ್ನು ಕಂದಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details