ವಿಜಯಪುರ: ಕೊರೊನಾ ರೋಗಿಗೆ 4 ಲಕ್ಷ ರೂ. ಬಿಲ್ ಮಾಡಿ ಬಾಕಿ ಹಣ ಪಾವತಿಸಿದ ಬಳಿಕ ಶವ ಕೊಂಡೊಯ್ಯುವಂತೆ ತಾಕೀತು ಮಾಡಿದ್ದ ವೈದ್ಯರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿ ಯುವ ಪರಿಷತ್ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದಾರೆ.
ಬಾಕಿ ಹಣ ಪಾವತಿಸಿ ಶವ ಕೊಂಡೊಯ್ಯಿರಿ ಎಂದಿದ್ದ ವೈದ್ಯನ ವಿರುದ್ಧ ಕ್ರಮಕ್ಕೆ ಆಗ್ರಹ - ಯುವ ಪರಿಷತ್ ವೇದಿಕೆ ಕಾರ್ಯಕರ್ತರು
ಕಳೆದೊಂದು ವಾರದ ಹಿಂದೆ ಮೃತಪಟ್ಟಿದ್ದ ಕೊರೊನಾ ಸೋಂಕಿತನಿಗೆ 4 ಲಕ್ಷ ಬಿಲ್ ಮಾಡಿ, ಬಾಕಿ ಹಣ ಪಾವತಿಸಿ ಶವ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದ್ದರು. ಈ ಹಿನ್ನೆಲೆ ಖಾಸಗಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕುಟುಂಬಸ್ಥರು ವೈದ್ಯರ ವಿರುದ್ಧ ಪ್ರಕರಣ ಸಹ ದಾಖಲಿಸಿದ್ದರು.

ಆದರೆ, ಜಿಲ್ಲಾಡಳಿತ ಮಾತ್ರ ಆರೋಪಿತರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಲಾಗಿದ್ದು, ಇನ್ನು ಕಳೆದ ಸೆ.25ರಂದು ವೈದ್ಯರ ಮೇಲೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸ್ ಇಲಾಖೆ ಆರೋಪಿತ ವೈದ್ಯರ ವಿಚಾರಣೆ ನಡೆಸಿಲ್ಲ ಅವರ ಮೇಲೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಯುವ ಪರಿಷತ್ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.