ವಿಜಯಪುರ : ಜಮೀನಿಗೆ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಕಿರುವ ಘಟನೆ ವಿಜಯಪುರ-ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ನಡೆದಿದೆ.
ವಿಜಯಪುರದಲ್ಲಿ ಭಾರಿ ಮಳೆ: ನಡುಗಡ್ಡೆಯಲ್ಲಿ ಸಿಲುಕಿ ಮರವೇರಿದ ಯುವಕರು! - ವಿಜಯಪುರ ಪ್ರವಾಹ ಸುದ್ದಿ
ವಿಜಯಪುರ-ಸವನಹಳ್ಳಿ ಬಳಿಯ ಡೋಣಿ ನದಿಯ ನಡುಗಡ್ಡೆಯಲ್ಲಿ ಜಮೀನಿಗೆ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನದಿ ನಡುಗಡ್ಡೆಯಲ್ಲಿ ಸಿಲುಕಿದ ಘಟನೆ ನಡೆದಿದೆ.
ಸವನಹಳ್ಳಿಯ ರಾಹುಲ್ ರಾಠೋಡ ಹಾಗೂ ಚನ್ನಬಸ್ಸು ಬಾವಿಕಟ್ಟಿ ಎಂಬ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಸಿದ್ದಾರೆ. ಹೊಲದ ಕೆಲಸ ಮುಗಿಸಿಕೊಂಡು ಮರಳುತ್ತಿರುವಾಗ ಯುವಕರ ಸುತ್ತಲೂ ಡೋಣಿ ನದಿ ನೀರು ಆವರಿಸಿದೆ. ನದಿ ನೀರಿನ ಸೆಳೆವಿನಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತುಕೊಂಡಿದ್ದಾರೆ.
ನಂತರ ಪೋನ್ ಮೂಲಕ ಕರೆಮಾಡಿ ಮನೆಯವರಿಗೆ ಪ್ರವಾಹದಲ್ಲಿ ಸಿಲುಕೊಂಡ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ಹಗ್ಗದ ಮೂಲಕ ಯುವಕರನ್ನು ರಕ್ಷಿಸಿದ್ದಾರೆ. ಬಬಲೇಶ್ವರ ಪೋಲಿಸ್ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.