ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ ಯೋಜನೆಯಡಿ ಉದ್ಯಾನವನದಲ್ಲಿ ವಾಯು ವಿಹಾರಿಗಳಿಗೆ ದೈಹಿಕ ಕಸರತ್ತು ಮಾಡಲು ವಿಜಯಪುರ ಮಹಾನಗರ ಪಾಲಿಕೆ ಆರಂಭಿಸಿರುವ ಓಪನ್ ಜಿಮ್ಗೆ ಕಳಪೆ ಕಾಮಗಾರಿಯ ಬಿಸಿ ತಟ್ಟಿದೆ ಎನ್ನಲಾಗಿದೆ.
ಓಪನ್ ಜಿಮ್ಗೆ ತಟ್ಟಿದ ಕಳಪೆ ಕಾಮಗಾರಿ ಬಿಸಿ - kannadanews
ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್ ಜಿಮ್ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿ ಬಂದಿದೆ.
ವಿಜಯಪುರ ಮಹಾನಗರ ಪಾಲಿಕೆಯಾದ ಮೇಲೆ ಮೊದಲ ಬಾರಿಗೆ ಬೆಂಗಳೂರು ಹೊರತುಪಡಿಸಿ ವಿಜಯಪುರ ಜಿಲ್ಲೆಯ ಗುರುಪಾದೇಶ್ವರ ನಗರದ ಉದ್ಯಾನವನದಲ್ಲಿ ಓಪನ್ ಜಿಮ್ ಆರಂಭಿಸಲಾಗಿದೆ. ಒಟ್ಟು 14 ಉದ್ಯಾನವನದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಓಪನ್ ಜಿಮ್ಗಳನ್ನು ಆರಂಭಿಸಲಾಗಿದೆ. ಬೆಳಗ್ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ವಾಕಿಂಗ್ ಟ್ರ್ಯಾಕ್ ಜತೆ ದೈಹಿಕ ಕಸರತ್ತು ಮಾಡಲು ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ.
ಪ್ರತೀ ಉದ್ಯಾನವನದಲ್ಲಿ 4ರಿಂದ 7 ಲಕ್ಷ ಖರ್ಚು ಮಾಡಿ ಜಿಮ್ ನಿರ್ಮಾಣ ಮಾಡಲಾಗಿದೆ. ಉಪಕರಣಗಳ ಫಿಟ್ಟಿಂಗ್ ಮಾಡುವಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ ತೋರಿದ ನಿರ್ಲಕ್ಷ್ಯದಿಂದ ಉಪಕರಣಗಳ ಜೋಡಣೆಗೆ ಬಳಸಿದ ಸಿಮೆಂಟ್ ಕಿತ್ತು ಹೋಗಿ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾಋಎ. ಇದರಿಂದ ಸಾರ್ವಜನಿಕರು ಜಿಮ್ ಮಾಡಲು ಹಿಂಜರಿಯುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.