ವಿಜಯಪುರ: ಬಹಿರ್ದೆಸೆಗೆ ಹೋಗಿದ್ದ ಹೆಂಡತಿ ಮೇಲೆ ಪತಿರಾಯನೊಬ್ಬ ಚಾಕುವಿನಿಂದ ಇರಿದು ಹಲ್ಲೆಗೈದಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬೆಳ್ಳುಬ್ಬಿ ಗ್ರಾಮದಲ್ಲಿ ನಡೆದಿದೆ.
2ನೇ ಮದುವೆಗೆ ಅನುಮತಿ ನಿರಾಕರಣೆ : ಬಹಿರ್ದೆಸೆಗೆ ಹೋಗಿದ್ದ ಪತ್ನಿ ಮೇಲೆ ಪತಿ ಹಲ್ಲೆ - ಬಹಿರ್ದೆಸೆಗೆ ಹೋಗಿದ್ದ ಹೆಂಡತಿಗೆ ಚಾಕು ಇರಿದ ಗಂಡ
2ನೇ ಮದುವೆಗೆ ಅನುಮತಿ ನೀಡಿಲ್ಲವೆಂದು ಬಹಿರ್ದೆಸೆಗೆ ಹೋಗಿದ್ದ ಪತ್ನಿ ಮೇಲೆ ಪತಿ ಚಾಕುವಿನಿಂದ ಇರಿದು ಹಲ್ಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ..
ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ
ಶೀಲಾ ಹರಿಜನ ಎಂಬುವರು ಹಲ್ಲೆಗೊಳಗಾದ ಪತ್ನಿ. ಗೋಪಾಲ ಶಂಕರಪ್ಪ ಹರಿಜನ ಎಂಬಾತ ಹಲ್ಲೆಗೈದಿರುವ ಪಾಪಿ ಪತಿ. ಎರಡನೇ ಮದುವೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹೆಂಡತಿ ಮೇಲೆ ಗೋಪಾಲ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಶೀಲಾ ಮುಖಕ್ಕೆ ಹಾಗೂ ಕುತ್ತಿಗೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಬಳಿಕ ಪತಿ ಪರಾರಿಯಾಗಿದ್ದು, ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.