ವಿಜಯಪುರ: ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ಭೀಮಾ ನದಿಗೆ ಬಿಡುತ್ತಿರುವ ಕಾರಣ ಕ್ಷಣ ಕ್ಷಣಕ್ಕೂ ಭೀಮಾ ನದಿ ಉಕ್ಕಿ ಆರ್ಭಟಿಸುತ್ತಿದೆ.
ಉಕ್ಕಿ ಆರ್ಭಟಿಸುತ್ತಿರುವ ಭೀಮಾ ನದಿ: ವಿಜಯಪುರದ ಹಲವು ಗ್ರಾಮಗಳು ಜಲಾವೃತ
ಸೊನ್ನ ಬ್ಯಾರೇಜ್ನಿಂದ 8 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ದೇವಣಗಾಂವ, ಕುಮಸಗಿ ಗ್ರಾಮಗಳು ನೀರಿನಿಂದ ಸುತ್ತುವರೆದಿದೆ.
ಸೊನ್ನ ಬ್ಯಾರೇಜ್ನಿಂದ 8 ಲಕ್ಷ ಕ್ಯೂಸೆಕ್ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನ ದೇವಣಗಾಂವ, ಕುಮಸಗಿ ಗ್ರಾಮಗಳು ನೀರಿನಿಂದ ಸುತ್ತುವರೆದಿದೆ. ದೇವಣಗಾಂವ, ಕುಮಸಗಿ, ಬ್ಯಾಡಗಿಹಾಳ, ಕಡ್ಲೇವಾಡ, ಶಂಬೇವಾಡ, ಕುಳೆಕುಮಟಗಿ, ಶಿರಸಗಿ ಗ್ರಾಮಗಳು ಜಲಾವೃತವಾಗಿದೆ. ಈ ಗ್ರಾಮಗಳ ಮನೆಗಳಿಗೆ ನೀರು ಆವರಿಸಿ, ಮನೆಗಳು ಮುಳುಗಡೆಯಾಗಿವೆ. ಕುಮಸಗಿ ಗ್ರಾಮಸ್ಥರು ಮನೆಗಳ ಮೇಲೇರಿ ಜೀವ ಉಳಿಸಿಕೊಳ್ಳುತ್ತಿದ್ದಾರೆ.
ದೇವಣಗಾಂವದ ಬಸ್ ನಿಲ್ದಾಣ, ಪಶು ಚಿಕಿತ್ಸಾಲಯ, ಪ್ರಗತಿಪರ ಶಿಕ್ಷಣ ಸಂಸ್ಥೆ ಕಾಲೇಜು ಆವರಣ, ಮಹಿಳಾ ಆರೋಗ್ಯ ಕೇಂದ್ರ, ಗ್ರಂಥಾಲಯ, ಭೀಮಾ ನದಿಯ ನೀರು ಮಾಪನ ಕೇಂದ್ರೀಯ ತಂತಿ ಕೇಂದ್ರ, ಅಂಗನವಾಡಿ ಕೇಂದ್ರ ನೀರಿನಿಂದ ಆವೃತವಾಗಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ - ದೇವಣಗಾಂವ ಸೇತುವೆಯ ಎತ್ತರಕ್ಕೆ ನೀರು ಹರಿಯುತ್ತಿದ್ದು, ಮೇಲ್ಭಾಗಕ್ಕೆ ತಲುಪಲು ಅರ್ಧ ಅಡಿ ಮಾತ್ರ ಬಾಕಿ ಇದೆ. ಸಂಜೆಯ ವೇಳೆಗೆ ಸೇತುವೆ ಜಲಾವೃತವಾಗಲಿದೆ.