ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಸಾಂಕ್ರಾಮಿಕ ರೋಗ ಹರಡುವ ತಾಣವಾದ ‘ಕೃಷಿ ಇಲಾಖೆ ಕಚೇರಿ ಆವರಣ’

ಮುದ್ದೇಬಿಹಾಳ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಗೊಬ್ಬು ನಾರುತ್ತಿದೆ. ಇದು ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಂತಾಗಿದೆ.

muddebihal
ಸಾಂಕ್ರಾಮಿಕ ರೋಗ ಹರಡುವ ತಾಣವಾದ ‘ಕೃಷಿ ಇಲಾಖೆಯ ಆವರಣ’

By

Published : Oct 22, 2020, 10:48 AM IST

ಮುದ್ದೇಬಿಹಾಳ:ಇಲ್ಲಿನ ಕೃಷಿ ಇಲಾಖೆ ಕಚೇರಿಯ ಆವರಣ ಸದ್ಯ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ.

ಕೃಷಿ ಇಲಾಖೆ ಆವರಣವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು: ಸಿದ್ಧನಗೌಡ ಬಿರಾದಾರ

ಪಟ್ಟಣದ ಜನನಿಬಿಡ ಸ್ಥಳದಲ್ಲಿರುವ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿ ಕೊಳಚೆ ನಿರ್ಮಾಣವಾಗಿದೆ. ಇದರಿಂದ ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಂತಾಗಿದೆ. ನಿಂತ ನೀರಿನಿಂದ ಕೆಟ್ಟ ವಾಸನೆ ಬರುತ್ತಿದ್ದ, ಕೃಷಿ ಇಲಾಖೆಯಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನೌಕರರು ಸೊಳ್ಳೆ ಬತ್ತಿಗಳನ್ನು ಹಚ್ಚಿಕೊಂಡು ಕೆಲಸ ಮಾಡುವಂತಾಗಿದೆ.

ಕೃಷಿ ಇಲಾಖೆಗೆ ವಿಶಾಲವಾದ ಖಾಲಿ ಜಾಗ ಇದೆ. ಇತ್ತೀಚೆಗೆ ಮಳೆ ಸುರಿದು ನೀರು ಸಂಗ್ರಹಗೊಂಡಿದ್ದು, ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಕೊಂಡಿಲ್ಲ. ಇಲಾಖೆಯ ಪಕ್ಕದಲ್ಲಿಯೇ ಗಣೇಶ ನಗರದ ನಿವಾಸಿಗಳು ವಾಸಿಸುತ್ತಿದ್ದು, ಮಳೆ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗ ಹರಡಲು ಕೊಳಚೆ ನೀರು ಕಾರಣವಾಗುತ್ತಿದೆ ಎಂದು ದೂರಿದ್ದಾರೆ.

ಕೃಷಿ ಇಲಾಖೆಯ ಆವರಣದಲ್ಲಿ ಅರ್ಧಕ್ಕೆ ನಿಂತಿರುವ ಕಾಂಪೌಂಡ್ ಕಾಮಗಾರಿ: ಕೃಷಿ ಇಲಾಖೆಗೆ ಸೇರಿದ ಕಾಂಪೌಂಡ್ ಕೂಡ ಅರ್ಧಕ್ಕೆ ನಿಂತಿದೆ. ಪ್ಲಾಸ್ಟರ್ ಇಲ್ಲ. ಪಿಲ್ಲರ್‌ಗಳನ್ನ ಅರ್ಧಕ್ಕೆ ನಿಲ್ಲಿಸಿದ್ದು, ಕಬ್ಬಿಣದ ರಾಡ್​​ಗಳು ಎದ್ದು ನಿಂತಿವೆ. ವರ್ಷಗಳೇ ಉರುಳಿದರೂ ಈ ಬಗ್ಗೆ ಕೃಷಿ ಇಲಾಖೆಗೆ ಬರುವ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ ಎನ್ನಲಾಗ್ತಿದೆ.

ಕೃಷಿ ಇಲಾಖೆ ಆವರಣವನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ಧನಗೌಡ ಬಿರಾದಾರ ಆಗ್ರಹಿಸಿದ್ದಾರೆ. ಇಲ್ಲಿ ನಿತ್ಯವೂ ನೂರಾರು ರೈತರು ತಮ್ಮ ಕೆಲಸಕ್ಕೆ ಬರುತ್ತಿರುತ್ತಾರೆ. ಅರಣ್ಯ ಇಲಾಖೆ ಗಿಡಗಳನ್ನು ಬೆಳೆಸಿ ನೆರಳಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಂಡಿದೆ. ಆದರೆ ಅದರ ಸುತ್ತಮುತ್ತಲು ಬೆಳೆದಿರುವ ಕಸ-ಕಡ್ಡಿ, ಮುಳ್ಳು ಕಂಟಿಗಳಿಂದ ರೈತರು ವಿಶ್ರಾಂತಿ ಪಡೆದುಕೊಳ್ಳಲು ತೊಂದರೆಯಾಗಿದೆ. ಅಧಿಕಾರಿಗಳು ಕೂಡಲೇ ಇದರ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ABOUT THE AUTHOR

...view details