ವಿಜಯಪುರ: ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿ ಹಾಗೂ ಎನ್‌ಟಿಪಿಸಿ ಕಾರಣವಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಸ್ಪಷ್ಟಪಡಿಸಿದರು.
ಇಂದು ವಿಜಯಪುರ ಜಿಲ್ಲೆಯ ಭೂಕಂಪನಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದಾಗ ಮಾತ್ರ ಭೂಕಂಪನದ ಅನುಭವ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹಾಗೆ ನೋಡಿದರೆ ಜಿಲ್ಲೆ ಬರಗಾಲ ಪೀಡಿತ ಪ್ರದೇಶ. ಈಗ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಒಣಪ್ರದೇಶದಲ್ಲಿ ನೀರು ಹೆಚ್ಚು ನುಗ್ಗಿದ್ದು, ಕಲ್ಲಿನ ಪದರಗಳು ಅಲುಗಾಡುತ್ತವೆ. ಇದರಿಂದ ದೊಡ್ಡ ಶಬ್ಧ ಬರುವ ಕಾರಣ ಕಂಪನ ಸೃಷ್ಟಿಯಾಗುತ್ತಿದೆ ಎಂದರು.