ವಿಜಯಪುರ:ಜಿಲ್ಲೆಯಲ್ಲಿ ಇಂದು 171 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಅಥಣಿ ರಸ್ತೆಯ ಭವಾನಿ ನಗರದ ರೋಗಿ- 57354, 53 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ವಿಜಯಪುರ ಜಿಲ್ಲೆಯಲ್ಲಿ ಇಂದು 171 ಜನರಿಗೆ ಸೋಂಕು ದೃಢ - corona news
ವಿಜಯಪುರದಲ್ಲಿ ಇಂದು 171 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಒಟ್ಟು ಸೋಂಕಿತರ ಸಂಖ್ಯೆ 1585ಕ್ಕೆ ಏರಿಕೆಯಾಗಿದೆ.
ಜುಲೈ 12ರಂದು ಜ್ವರ, ಕೆಮ್ಮು, ನೆಗಡಿ ಹಾಗೂ ತೀವ್ರ ಶ್ವಾಸಕೋಶ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಶಿಷ್ಟಾಚಾರದಂತೆ ಅಂತ್ಯಕ್ರಿಯೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1585ಕ್ಕೆ ಏರಿಕೆಯಾಗಿದೆ. ಇಂದು ಬಂದ ಪಾಸಿಟಿವ್ ವರದಿಯಲ್ಲಿ ಪುರುಷರು-99 ಮಹಿಳೆಯರು-48, ಯುವಕರು-16, ಯುವತಿಯರು-4, ಬಾಲಕರು-3 ಮತ್ತು ಓರ್ವ ಬಾಲಕಿ ಇದ್ದಾರೆ.
ಒಟ್ಟು 531 ಜನ ಸೋಂಕಿತರು ಜಿಲ್ಲಾ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 21 ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 39,992 ಜನರ ಮೇಲೆ ನಿಗಾ ಇಡಲಾಗಿದೆ. 39,063 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 36,334 ಜನರ ವರದಿ ನೆಗಟಿವ್ ಬಂದಿದೆ. ಇನ್ನೂ 1144 ಜನರ ವರದಿ ಬರಬೇಕಾಗಿದೆ. ಇಲ್ಲಿಯವರೆಗೆ 1397 ಜನ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 320 ಕಂಟೇನ್ಮೆಂಟ್ ವಲಯವಿದ್ದು, 205 ಚಾಲ್ತಿಯಲ್ಲಿ ಇವೆ.