ವಿಜಯಪುರ: ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣವಿದ್ದ ಗುಮ್ಮಟನಗರಿಯಲ್ಲಿ ಇಂದು ಜಿಟಿ ಜಿಟಿ ಮಳೆ ಆರಂಭಗೊಂಡಿದೆ.
ಗುಮ್ಮಟ ನಗರಿಯಲ್ಲಿ ಜಿಟಿ ಜಿಟಿ ಮಳೆ: ಸಂತಸಗೊಂಡ ಜನತೆ - ವಿಜಯಪುರ ಮಳೆ ನ್ಯೂಸ್
ಇಂದು ಬೆಳಗ್ಗೆಯಿಂದಲೇ ವಿಜಯಪುರ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ನಗರದ ಜನತೆ ಸಂತಸಗೊಂಡಿದ್ದಾರೆ.
Rain
ನಗರದ ಸ್ಟೇಷನ್ ರಸ್ತೆ, ಕೇಂದ್ರ ಬಸ್ ನಿಲ್ದಾಣ, ಬಡೆ ಕಮಾನ ರಸ್ತೆ, ಗೋಪಾಲಪುರ ಗಲ್ಲಿ ಸೇರಿದಂತೆ ನಗರದ ಬಹುತೇಕ ಕಡೆಯಲ್ಲಿ ಬೆಳಗ್ಗೆಯಿಂದಲೂ ಮಳೆಯಾಗುತ್ತಿದೆ. ಗುಮ್ಮಟನಗರಿಯಲ್ಲಿ ಮಲೆನಾಡಿನ ವಾತಾವರಣ ನಿರ್ಮಾಣವಾಗಿರುವುದಕ್ಕೆ ನಗರದ ಜನತೆ ಸಂತಸಗೊಂಡಿದ್ದಾರೆ.
ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವ ಹಿನ್ನೆಲೆ ಜನರು ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುವ ದೃಶ್ಯ ಸಹ ಕಂಡುಬಂದಿತು.