ಕರ್ನಾಟಕ

karnataka

ETV Bharat / state

ವಿಜಯಪುರ ಪೊಲೀಸರಿಂದ ಮೂವರು ದರೋಡೆಕೋರರ ಬಂಧನ - Vijayapura police

ವಿಜಯಪುರ ಜಿಲ್ಲೆ ಸಾರವಾಡ ಬಳಿ ಮೂವರು ದರೋಡೆಕೋರರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

ವಿಜಯಪುರ ಪೊಲೀಸರಿಂದ ಮೂವರು ದರೋಡೆಕೋರರ ಬಂಧನ

By

Published : Oct 10, 2019, 5:03 AM IST

ವಿಜಯಪುರ:ಗ್ರಾಮೀಣ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಅಂತಾರಾಜ್ಯ ದರೋಡೆಕೋರ ಸೇರಿ ಒಟ್ಟು ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ಇಂದ್ರಪುರಿ, ವಿಜಯಪುರದ ರವಿಚಂದ್ರ ಪೂಜಾರಿ ಹಾಗೂ ಪ್ರಕಾಶ ಕುರಿಗಾರ ಬಂಧಿತ ಆರೋಪಿಗಳು. ಬಂಧಿತರಿಂದ 50 ಸಾವಿರ ನಗದು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಸಾರವಾಡ ಬಳಿ ವಾಹನ ದರೋಡೆಗೆ ಸಂಚು ರೂಪಿಸಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಪುರ ಗ್ರಾಮೀಣ ಸಿಪಿಐ ಮಹಾಂತೇಶ ಧಾಮಣ್ಣವರ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು, ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details