ವಿಜಯಪುರ: ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆ, ಸ್ಟೇಷನ್ ರಸ್ತೆಯಲ್ಲಿನ ಬಡೆಕಮಾನ್ ಕ್ರಾಸ್ನಿಂದ ಗೋಲ್ ಗುಂಬಜ್ ಪೊಲೀಸ್ ಠಾಣೆವರೆಗಿನ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು. ಆದ್ರೀಗ ಸೀಲ್ ಡೌನ್ನನ್ನು ತೆರವುಗೊಳಿಸಲಾಗಿದೆ.
ವಿಜಯಪುರ: ಸೀಲ್ ಡೌನ್ ಪ್ರದೇಶಗಳಲ್ಲಿ ಸಡಿಲಿಕೆ
ವಿಜಯಪುರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿತ್ತು. ಇದನ್ನು ಜಿಲ್ಲಾಡಳಿತ ಇಂದು ತೆರವುಗೊಳಿಸಿದೆ. ಅಲ್ಲದೇ ಸೋಂಕು ಕಂಡುಬಂದ ಮನೆಯ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಮಾತ್ರ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ನಗರದಲ್ಲಿ ಪ್ರಥಮವಾಗಿ 60 ವರ್ಷದ ವೃದ್ಧೆಯಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಸೀಲ್ ಡೌನ್ ಮಾಡಲಾಗಿತ್ತು. ಅಲ್ಲದೇ ಚಪ್ಪರ್ ಬಂದ್ ಕಾಲೋನಿ, ಜಾಡರ ಓಣಿ, ಜುಮ್ಮಾ ಮಸೀದ್ ಏರಿಯಾ, ಕೆಹೆಚ್‌ಬಿ ಕಾಲೋನಿ ಸೇರಿದಂತೆ ಹಲವು ಬಡಾವಣೆಗಳನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಸೋಂಕು ಕಂಡು ಬಂದ ಮನೆಯ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಮಾತ್ರ ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸೀಲ್ ಮಾಡಲಾದ ಬಡಾವಣೆಗಳ ರಸ್ತೆಗಳಿಗೆ ಹಾಕಲಾದ ಮುಳ್ಳಿನ ಕಂಟಿಗಳನ್ನ ಜಿಲ್ಲಾಡಳಿತ ತೆರವುಗೊಳಿಸಿದೆ. ಅಲ್ಲದೇ ಸೀಲ್ ಡೌನ್ ಆಗಿ ಮನೆಯಲ್ಲಿ ಉಳಿದಿದ್ದ ಜನ್ರಿಗೆ, ಮಾಹಾನಗರ ಪಾಲಿಕೆ ಬಡವಾಣೆಗಳಿಗೆ ರಿಲೀಫ್ ನೀಡಿರೋದು ಖುಷಿ ತಂದಿದೆ.