ಕರ್ನಾಟಕ

karnataka

ETV Bharat / state

ಹೊನವಾಡ ಕೆರೆ ಹೂಳೆತ್ತುವ ಕೆಲಸ ಪರಿಶೀಲಿಸಿದ ವಿಜಯಪುರ ಡಿಸಿ: ಇದು ಈಟಿವಿ ಭಾರತ ಫಲಶೃತಿ

ವಿಜಯಪುರ ಜಿಲ್ಲೆಯಿಂದ ಗುಳೆ ಹೋಗುವುದನ್ನು ತಪ್ಪಿಸಲು ಗ್ರಾಮಸ್ಥರಿಗೆ ಕೆರೆ ಹೊಳೆತ್ತುವ ಕೆಲಸ ನೀಡಿದ ಊರಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

dsdsd
ಹೊನವಾಡ ಕೆರೆ ಹೂಳೆತ್ತುವ ಕೆಲಸ ಪರಿಶೀಲಿಸಿದ ವಿಜಯಪುರ ಡಿಸಿ

By

Published : Jul 1, 2020, 4:19 PM IST

ವಿಜಯಪುರ: ಕೊರೊನಾ ಭೀತಿ ಹಿನ್ನೆಲೆ ವಿವಿಧ ರಾಜ್ಯಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಕಾರ್ಮಿಕರನ್ನು ಕೆರೆ ಹೂಳೆತ್ತುವ ಕಾಮಗಾರಿಗೆ ಬಳಸಿಕೊಂಡು ಗುಳೆ ತಪ್ಪಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಮತ್ತು ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೊನವಾಡ ಕೆರೆ ಹೂಳೆತ್ತುವ ಕೆಲಸ ಪರಿಶೀಲಿಸಿದ ವಿಜಯಪುರ ಡಿಸಿ

ಜೂನ್ 29ರಂದು "ಈಟಿವಿ ಭಾರತ" ದಲ್ಲಿ 'ಗುಳೆ ಕಾರ್ಮಿಕರಿಗೆ ಉದ್ಯೋಗ ನೀಡಿದ ಗ್ರಾಮ ಪಂಚಾಯಿತಿ' ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ಹೊನವಾಡ ಗ್ರಾಮಕ್ಕೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಡಿ 400ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ನೀಡಿರುವ ಕುರಿತು ಮಾಹಿತಿ ಪಡೆದುಕೊಂಡರು. ಕೆಲವರಿಗೆ ಕೂಲಿ ಹಣ ಸಿಗುತ್ತಿಲ್ಲ ಎನ್ನುವ ದೂರು ಕುರಿತು "ಈಟಿವಿ ಭಾರತ" ವಿಸ್ತೃತ ವರದಿಯಲ್ಲಿ ವಿವರಿಸಲಾಗಿತ್ತು.

ವಿಜಯಪುರ: ಗುಳೆ ಕಾರ್ಮಿಕರಿಗೆ ಉದ್ಯೋಗ ನೀಡಿದ ಗ್ರಾಮ ಪಂಚಾಯಿತಿ

ಈ ಹಿನ್ನೆಲೆ ಮುಂದೆ ಸರಿಯಾದ ಸಮಯಕ್ಕೆ ಕೂಲಿ ಹಣ ನೀಡಲು ಪಿಡಿಓ ಉಪ್ಪಲದಿನ್ನಿಗೆ ಸೂಚಿಸಿದರು. ನಂತರ ಕಾರ್ಮಿಕರ ಜತೆ ಮಾತನಾಡಿದ ಜಿಲ್ಲಾಧಿಕಾರಿ, ಜನರು ಗುಳೆ ಹೋಗಿ ಸಂಕಷ್ಟಪಡುವುದನ್ನು ಬಿಟ್ಟು ಗ್ರಾಮದಲ್ಲಿಯೇ ಸರ್ಕಾರದ ಹಲವಾರು ಯೋಜನೆಗಳಲ್ಲಿ ದೊರೆಯುವ ಸೌಲಭ್ಯ, ಕೂಲಿ ಕೆಲಸ ಸದುಪಯೋಗಪಡಿಸಿಕೊಂಡು ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ABOUT THE AUTHOR

...view details