ಕರ್ನಾಟಕ

karnataka

ETV Bharat / state

ಸಾಲ‌ ಕೊಡಿಸುವುದಾಗಿ ಪಂಗನಾಮ: ಮನೆ ಜಪ್ತಿಯ ಬ್ಯಾಂಕ್​ ನೋಟಿಸ್​ನಿಂದ ವಂಚನೆ ಬೆಳಕಿಗೆ - vdcc bank fraud

ಬ್ಯಾಂಕ್​ನಲ್ಲಿ ಪರಿಚಯವಾಗಿ ಸಾಲ ಕೊಡಿಸುವುದಾಗಿ ಭರವಸೆ ನೀಡಿ ದಾಖಲೆಗಳನ್ನು ಪಡೆದು ವಂಚನೆ ಮಾಡಿರುವ ಪ್ರಕರಣ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.

vdcc bank fraud in Vijayapur
ಸಾಲ‌ ಕೊಡಿಸುವುದಾಗಿ ಪಂಗನಾಮ

By

Published : Nov 18, 2022, 5:05 PM IST

ವಿಜಯಪುರ: ಹಣಕಾಸಿನ ಅಡಚಣೆಯಿಂದಾಗಿ ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯ ದಾಖಲೆ ಪಡೆದು ಆತನಿಗೆ ಗೊತ್ತಿಲ್ಲದಂತೆ 11 ಲಕ್ಷ ರೂ ಸಾಲ ಪಡೆದು‌ ಮೋಸ ಮಾಡಿರುವ ಘಟನೆ ವಿಜಯಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಸವೇಶ್ವರ ವೃತ್ತದಲ್ಲಿರುವ ವಿಡಿಸಿಸಿ ಬ್ಯಾಂಕ್‌ನಲ್ಲಿ ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕೃಷ್ಣ ಕಾಳೆ ಎಂಬುವವರು ವಂಚನೆಗೆ ಒಳಗಾಗಿದ್ದಾರೆ.

ಅರವಿಂದ ಅವರ ಹೆಸರಿನ ಖಾತೆಯ ಮೂಲಕ 11 ಲಕ್ಷ ರೂ ಸಾಲ ತೆಗೆದಿದ್ದು, ಬ್ಯಾಂಕ್‌ನಿಂದ ನೋಟಿಸ್‌ ಬಂದಾಗಲೇ ವಂಚನೆಯ ಅರಿವಾಗಿದೆ. ನಗರದ ದಿವಟೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಕಳೆದ ವರ್ಷ 2021 ಫೆಬ್ರವರಿ 15ರಂದು ಅರವಿಂದ ಅವರಿಗೆ ಪರಿಚಯವಾಗಿದ್ದರು. ಸಾಲ ಕೊಡಿಸುವುದಾಗಿ ಹೇಳಿ ಆಧಾರ್‌ ಕಾರ್ಡ್‌, ಫೋಟೊ ಹಾಗೂ ಮನೆ ಉತಾರ್​(ಪಹಣಿ) ಪಡೆದುಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಗಾಂಧಿಚೌಕ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ ಜಪ್ತಿಯ ಬ್ಯಾಂಕ್​ ನೋಟಿಸ್​ನಿಂದ ವಂಚನೆ ಬೆಳಕಿಗೆ ಬಂದಿದೆ ಎಂದ ಎಸ್​ ಪಿ ಆನಂದ್​ ಕುಮಾರ್​

2022 ಅಕ್ಟೋಬರ್​ನಲ್ಲಿ ವಿಡಿಸಿಸಿ ಬ್ಯಾಂಕಿನಿಂದ ಮೋಸಕ್ಕೊಳಗಾದ ಅರವಿಂದ‌ ಕಾಳೆಗೆ ಸಾಲ‌ ಕುರಿತು ನೋಟಿಸ್ ಬಂದಿದೆ. ಆ ನಂತರ ತಾನು ಶಿವಕುಮಾರ ಚಿಕ್ಕೋಡಿ ಎಂಬವನಿಂದ ಮೋಸ ಹೋಗಿರುವುದಾಗಿ ಅರವಿಂದ‌ ಕಾಳೆಗೆ ಅರಿವಿಗೆ ಬಂದಿದೆ. ಸದ್ಯ ಸಾಲ ಪಡೆದ ಮಾಹಿತಿಯನ್ನು ಬ್ಯಾಂಕ್, ಮನೆ ಜಪ್ತಿ ಮಾಡುವುದಾಗಿ ನೋಟಿಸ್​ ನೀಡಿದೆ.

ಖೊಟ್ಟಿ(ನಕಲಿ) ದಾಖಲೆ ಸೃಷ್ಟಿ ಮಾಡಿ, ನಕಲಿ ಸಹಿ ಮಾಡಿ ವಿಡಿಸಿಸಿ ಬ್ಯಾಂಕ್ ನಿಂದ 11ಲಕ್ಷ ರೂ. ಹಣ ಮೋಸ ಮಾಡಿ ತಲೆಮರೆಸಿಕೊಂಡಿರುವ ಶಿವಕುಮಾರ ಚಿಕ್ಕೋಡಿ ವಿರುದ್ಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 420, 465, 468 ಹಾಗೂ 471 ಅಡಿ ಪ್ರಕರಣ ದಾಖಲಿಸಿದ್ದಾರೆ.

ಎಸ್​ಪಿ ಪ್ರತಿಕ್ರಿಯೆ:ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್​ಪಿ ಆನಂದ್​ ಕುಮಾರ್​, ಆರೋಪಿ ಶಿವಕುಮಾರ ಚಿಕ್ಕೋಡಿ ವಿರುದ್ಧ ಈ ಹಿಂದೆ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಸಹ ಈ ರೀತಿ ಅಪರಿಚಿತರಿಗೆ ತಮ್ಮ ಮೂಲ ದಾಖಲೆಗಳನ್ನು ನೀಡಿ ಮೋಸಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ. ಮತ್ತು ತನಿಖೆ ಚುರುಕುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ :ಅಧಿಕಾರಿಗಳ ಹೆಸರಿನಲ್ಲಿ ಹಣ ವಸೂಲಿ: 7 ಮಂದಿ ಆರೋಪಿಗಳ ಬಂಧನ

ABOUT THE AUTHOR

...view details