ವಿಜಯಪುರ: ಇಬ್ಬರು ಅಪರಿಚಿತ ಯುವತಿಯರ ಶವಗಳು ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲೋಟಗಿ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿವೆ.
ಇಬ್ಬರು ಅಪರಿಚಿತ ಯುವತಿಯರ ಶವಗಳು ಬಾವಿಯಲ್ಲಿ ಪತ್ತೆ
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲೋಟಗಿ ಗ್ರಾಮದ ಬಾವಿಯಲ್ಲಿ ಇಬ್ಬರು ಅಪರಿಚಿತ ಯುವತಿಯರು ಶವವಾಗಿ ಪತ್ತೆಯಾಗಿದ್ದಾರೆ.
deadbovdy
ಇಬ್ಬರೂ ಯುವತಿಯರು 20 ಅಥವಾ 21ವರ್ಷದವರಾಗಿದ್ದು, ಎರಡು ದಿನಗಳ ಹಿಂದೆ ಈ ಯುವತಿಯರನ್ನು ಕೊಲೆ ಮಾಡಿ ದುರ್ಷ್ಕಮಿಗಳು ಬಾವಿಯಲ್ಲಿ ಎಸೆದು ಹೋಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಈ ಟಿವಿ ಭಾರತ ಜತೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರಸಿದ್ದಿ, ಇಬ್ಬರು ಯುವತಿಯರ ಶವಗಳು ಕುದರಿಸಾಲೋಟಗಿ ಗ್ರಾಮದ ಹೊಲದ ಬಾವಿಯಲ್ಲಿ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.