ವಿಜಯಪುರ: ಕೋವಿಡ್ನಿಂದ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದ ಗೋಳಗುಮ್ಮಟ ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಇದು ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ತಂದಿದೆ. ವಿದೇಶಿ ಪ್ರವಾಸಿಗರ ಸಂಖ್ಯೆ ಮಾತ್ರ ಕುಸಿದಿದೆ.
ಗೋಳಗುಮ್ಮಟ ನೋಡಲು ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಕೊರೊನಾ ಕಾರಣ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿತ್ತು. ಏಳು ತಿಂಗಳುಗಳ ಕಾಲ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಈ ನಿರ್ಬಂಧ ತೆರವಿನ ನಂತರವೂ ಪ್ರವಾಸಿಗರ ಸಂಖ್ಯೆಯೇನೂ ನಿರೀಕ್ಷೆಯಷ್ಟು ಏರಿಕೆಯಾಗಿರಲಿಲ್ಲ. ಆದ್ರೆ ಕಳೆದ ಕೆಲ ಸಮಯದಿಂದ ಗೋಳಗುಮ್ಮಟ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಗೋಳಗುಮ್ಮಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಳ 2020ರಲ್ಲಿ ಗೋಳಗುಮ್ಮಟ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. 2021ರ ಜುಲೈನಿಂದ ಮತ್ತೊಮ್ಮೆ ಗುಮ್ಮಟ ವೀಕ್ಷಣೆಗೆ ಅವಕಾಶ ನೀಡಿದ ಮೇಲೆ ಜುಲೈನಲ್ಲಿ- 33,509 ಪ್ರವಾಸಿಗರು, ಅಗಸ್ಟ್- 32,397, ಸೆಪ್ಟೆಂಬರ್- 35,437, ಅಕ್ಟೋಬರ್- 12,792, ನವೆಂಬರ್ 68,666, ಡಿಸೆಂಬರ್ 66,211 ಪ್ರವಾಸಿಗರು ಗೋಳಗುಮ್ಮಟಕ್ಕೆ ಭೇಟಿ ಕೊಟ್ಟಿದ್ದರು. ಕೇವಲ 4 ವಿದೇಶಿ ಪ್ರವಾಸಿಗರು ಬಂದಿದ್ದರು. ಈ ವರ್ಷದ ಜನವರಿಯಲ್ಲಿ- 39,722 ಪ್ರವಾಸಿಗರು, ಫೆಬ್ರವರಿ- 50,315, ಮಾರ್ಚ್- 50,369, ಏಪ್ರಿಲ್ನಲ್ಲಿ 54,936 ಹಾಗೂ 16 ಮಂದಿ ವಿದೇಶಿಯರು ಗೋಳಗುಮ್ಮಟ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ನೋಡಿ: ಗಾಳಕ್ಕೆ ಬಿತ್ತು ಬೃಹತ್ ಗಾತ್ರದ ಕುರುಡೆ ಮೀನು!
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿರುವ ಆಲಮಟ್ಟಿ, ಕೂಡಲಸಂಗಮ, ಬಾದಾಮಿ, ಐಹೊಳೆ, ಪಟ್ಡದಕಲ್ಲುಗಳ ವೀಕ್ಷಣೆಗೂ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಆದರೆ ಕರೊನಾ ನಾಲ್ಕನೇ ಅಲೆ ಬಗ್ಗೆಯೂ ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.