ವಿಜಯಪುರ: ಮಕ್ಕಳಿಗಾಗಿ ಸರ್ಕಾರ ನೀಡುವ ಅಂಗನವಾಡಿ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಕದಿಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಅಂಗನವಾಡಿ ಕಾರ್ಯಕರ್ತೆಯೇ ಮಕ್ಕಳ ಆಹಾರಕ್ಕೆ ಕನ್ನ ಹಾಕಿದರೇ? - Theft by Anganwadi worker
ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಸರ್ಕಾರ ನೀಡುವ ರವೆ ಚೀಲವನ್ನು ಕದ್ದು ಒಯ್ಯುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ಗ್ರಾಮಸ್ಥರು ಹಿಡಿದ್ದಾರೆ.
Theft by Anganwadi worker
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರ ಅಂಗನವಾಡಿಯ ಕಾರ್ಯಕರ್ತೆ ಮೇಲೆ ಆರೋಪ ಕೇಳಿ ಬಂದಿದ್ದು, ಮಕ್ಕಳಿಗೆ ಬಂದಿದ್ದ ರವೆ ಚೀಲ ಒಯ್ಯುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ರವೆ ಮೂಟೆ ಒಯ್ಯುವುದನ್ನು ಗಮನಿಸಿದ ಸ್ಥಳೀಯರು ಕಾರ್ಯಕರ್ತೆಯನ್ನು ತಡೆದಿದ್ದಾರೆ. ನಂತರ ಕಾರ್ಯಕರ್ತೆಗೂ ಹಾಗೂ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದಿದೆ.
ಕೂಡಲೇ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತ್ತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.