ಮುದ್ದೇಬಿಹಾಳ:ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ರೈತರು ಕೊರೊನಾ ಸಂಕಟದಿಂದ ಪಾರಾದ ಬಳಿಕ ಮೊದಲ ಬಾರಿಗೆ ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಬ್ಬದ ಅಂಗವಾಗಿ ತಾಲೂಕಿನಲ್ಲಿ ವಿವಿಧೆಡೆ ಎತ್ತುಗಳ ಕರಿ ಹರಿಯುವುದಕ್ಕಾಗಿ ವಿವಿಧ ವಸ್ತುಗಳ ದರ ಹೆಚ್ಚಳವಿದ್ದರೂ ಖರೀದಿ ಭರಾಟೆ ಜೋರಾಗಿದೆ. ರೈತರು ತಮ್ಮ ಎತ್ತುಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸುತ್ತದೆ.
ಕಾರ ಹುಣ್ಣಿಮೆಯ ಸಿದ್ದತೆ ಈ ಬಾರಿ ಕೊರೊನಾ ವೈರಸ್ ಆರ್ಭಟದಿಂದಾಗಿ ಕಳೆಗುಂದಿದ್ದರೂ ಜನರ ಉತ್ಸಾಹಕ್ಕೆ ಬರವಿಲ್ಲ. ಲಾಕ್‌ಡೌನ್‌ನಿಂದಾಗಿ ರೈತರು ಹಾಗೂ ಕೃಷಿ ಸಾಮಗ್ರಿ ಮಾರಾಟ ಮಾಡುವವರು ಕಷ್ಟ ಅನುಭವಿಸಿದ್ದಾರೆ. ಕಳೆದ ವರ್ಷವೂ ಹಬ್ಬ ಅಷ್ಟಕ್ಕಷ್ಟೇ ಆಚರಣೆಯಾದರೆ ಈ ವರ್ಷವೂ ಎರಡು ತಿಂಗಳು ಲಾಕ್‌ಡೌನ್ ನಷ್ಟದ ನಡುವೆಯೂ ರೈತರು ವಸ್ತುಗಳ ಖರೀದಿಸುತ್ತಿದ್ದಾರೆ.