ಕರ್ನಾಟಕ

karnataka

ETV Bharat / state

ಮೆಟ್ಟಿಲಿಂದ ಬಿದ್ದು ಗಾಯಗೊಂಡಿದ್ದ ಯೋಧ ಸಾವು - ವಿಜಯಪುರದಲ್ಲಿ ಯೋಧ ಸಾವು

ಹಾಸನದಲ್ಲಿ ಕರ್ತವ್ಯದಲ್ಲಿದ್ದಾಗ ಮೆಟ್ಟಿಲು ಮೇಲಿಂದ ಬಿದ್ದ ಪರಿಣಾಮ ಗಾಯಗೊಂಡಿದ್ದ ಯೋಧ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

The death of a soldier in Vijayapura
ಮೆಟ್ಟಿಲು ಮೇಲಿಂದ ಬಿದ್ದು ಗಾಯಗೊಂಡಿದ್ದ ಯೋಧ ಸಾವು

By

Published : Mar 8, 2021, 11:49 AM IST

ವಿಜಯಪುರ: ಮೆಟ್ಟಿಲು ಮೇಲಿಂದ ಬಿದ್ದು ಗಾಯಗೊಂಡಿದ್ದ ಜಿಲ್ಲೆಯ ಇಂಡಿ ತಾಲೂಕಿನ ಬಸನಾಳ ಗ್ರಾಮದ ಯೋಧ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹಣಮಂತ ಕೊಳುರಗಿ (45) ಮೃತ ಯೋಧನಾಗಿದ್ದಾನೆ. ‌ಹಾಸನದಲ್ಲಿ ಕರ್ತವ್ಯದಲ್ಲಿದ್ದಾಗ ಮೆಟ್ಟಿಲು ಮೇಲಿಂದ ಬಿದ್ದ ಪರಿಣಾಮ ಗಾಯಗಳಾಗಿದ್ದವು. ಹಾಸನದ ಸಿ ಐ ಎಸ್ ಎಫ್ ನಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿದ್ದರು.

ಯೋಧನನ್ನು ಮೆಟ್ಟಿಲು ಮೇಲಿಂದ ಬಿದ್ದ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಯೋಧ ಹಣಮಂತ ಸಾವನ್ನಪ್ಪಿದ್ದಾನೆ. ಇಂದು ಯೋಧನ ಪಾರ್ಥಿವ ಶರೀರ ಸ್ವ ಗ್ರಾಮ ಬಸನಾಳಕ್ಕೆ ಆಗಮಿಸಿದೆ. ಸಾರ್ವಜನಿಕ ದರ್ಶನದ ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೇರವೇರಲಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ.

ಮೆಟ್ಟಿಲು ಮೇಲಿಂದ ಬಿದ್ದು ಗಾಯಗೊಂಡಿದ್ದ ಯೋಧ ಸಾವು

ಓದಿ : ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ: ಕರ್ನಾಟಕ ಗಡಿಯೊಳಗೆ ನುಗ್ಗಲು ಯತ್ನ ಪೊಲೀಸ್ ಬಿಗಿ ಭದ್ರತೆ

ABOUT THE AUTHOR

...view details