ವಿಜಯಪುರ:ಭೀಮಾತೀರದ ಹೋರಾಟ ಇನ್ನೂ ತಣ್ಣಗಾಗುವಂತಹ ಲಕ್ಷಣ ಕಾಣುತ್ತಿಲ್ಲ. ಪೊಲೀಸ್ ಎನ್ ಕೌಂಟರ್ಗೆ ಬಲಿಯಾಗಿರುವ ಹಂತಕ ಧರ್ಮರಾಜ್ ಚಡಚಣ ಕುಟುಂಬ ಮತ್ತೆ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.
ವಿಮಲಾಬಾಯಿ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದಾರೆ. ಭೀಮಾತೀರದ ಹಂತಕ ಹತ್ಯೆಯ ಆರೋಪಿ ಮಹಾದೇವ ಭೈರಗೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಚಡಚಣ ಮಾಜಿ ಸಿಪಿಐ ಹಾಗೂ ಪಿಎಸ್ಐ ಭಾಗಿಯಾದ ಪ್ರಕರಣ ಈಗ ಭಾರೀ ಸುದ್ದಿ ಮಾಡಿದೆ. ಜನ್ಮದಿನಕ್ಕೆ ಹಾಜರಾದ ಮಾಜಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಧರ್ಮರಾಜ್ ಚಡಚಣ ಅವರ ತಾಯಿ ವಿಮಲಾಬಾಯಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ಮನವಿ ಮಾಡಿಕೊಂಡಿರುವ ವಿಮಲಾಬಾಯಿ ಮಹಾದೇವ ಸಾಹುಕಾರ ಭೈರಗೊಂಡ ಅವರ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ. ಜೈಲಿನಿಂದ ಬಂದ ಬಳಿಕ ಮತ್ತೆ ಒಂದೇ ವೇದಿಕೆಯಲ್ಲಿ ಮೂವರು ಕಾಣಿಸಿಕೊಂಡಿದ್ದಾರೆ. ಮಹಾದೇವ ಭೈರಗೊಂಡ, ಚಡಚಣ ಪಿಎಸ್ಐ ಗೋಪಾಲ ಹಳ್ಳೂರ್, ಸಿಪಿಐ ಎಮ್ ಬಿ ಅಸೋಡೆ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ಕೊಲೆ ಪ್ರಕರಣವನ್ನು ಸಿಐಡಿ ತಂಡಕ್ಕೆ ವಹಿಸಲಾಗಿತ್ತು.
ಇತ್ತೀಚೆಗೆ ಜಾಮೀನು ಮೇಲೆ ಮೂವರು ಹೊರಬಂದಿದ್ದಾರೆ. ಕಾಂಗ್ರೆಸ್ ಸರ್ಕಾರ, ಪ್ರಕರಣವನ್ನು ಸಿಬಿಐ ಗೆ ನೀಡಲಿಲ್ಲ.ಇನ್ನಾದರೂ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ವಿಮಲಾಬಾಯಿ ಒತ್ತಾಯಿಸಿದ್ದಾರೆ.