ವಿಜಯಪುರ: ಜಿಲ್ಲೆಯ ನೂತನ ತಾಲೂಕು ತಿಕೋಟಾದಲ್ಲಿ ಹೊಸದಾಗಿ ನಿರ್ಮಿಸಿರುವ ತಾಲೂಕು ಪಂಚಾಯತ್ ಕಾರ್ಯಾಲಯವನ್ನು ಮಾಜಿ ಸಚಿವ, ಶಾಸಕ ಡಾ. ಎಂ.ಬಿ.ಪಾಟೀಲ್ ಉದ್ಘಾಟಿಸಿದರು.
ತಿಕೋಟಾ ತಾಲೂಕು ಪಂಚಾಯತ್ ಕಚೇರಿ ಉದ್ಘಾಟಿಸಿದ ಶಾಸಕ ಎಂ.ಬಿ.ಪಾಟೀಲ್
ಈ ಹಿಂದೆ ತಿಕೋಟಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದ್ದು, ಅದರಂತೆ ಇಂದು ನೂತನ ತಾಲೂಕು ಕೇಂದ್ರವಾಗಿ ಘೋಷಣೆಗೊಂಡು ತನ್ನ ಕಾರ್ಯ ಆರಂಭಿಸಿದೆ.
ತಿಕೋಟಾದ ತಾಲೂಕು ಪಂಚಾಯತಿ ಕಚೇರಿ ಉದ್ಘಾಟಿಸಿದ ಶಾಸಕ ಎಂ.ಬಿ.ಪಾಟೀಲ್
ಈ ಹಿಂದೆ ತಿಕೋಟಾವನ್ನು ತಾಲೂಕು ಕೇಂದ್ರವನ್ನಾಗಿ ಮಾಡುತ್ತೇನೆ ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದ್ದು, ಅದರಂತೆ ಇಂದು ನೂತನ ತಾಲೂಕು ಕೇಂದ್ರವಾಗಿ ಘೋಷಣೆಗೊಂಡು ತನ್ನ ಕಾರ್ಯ ಆರಂಭಿಸಿದೆ.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸ್ಥಳೀಯ ಜನತೆ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಭವನದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.