ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಪೊಲೀಸ್​ ಠಾಣೆ ಆವರಣದಲ್ಲಿ ಹಾವು ಪ್ರತ್ಯಕ್ಷ - snake fund in police station

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಸಿಇಐ ಕಚೇರಿಯಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಅದನ್ನು ಹಿಡಿದು ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದೆ.

snake found in police station
ಪೊಲೀಸ್​ ಠಾಣೆ ಆವರಣದಲ್ಲಿ ಹಾವು ಪ್ರತ್ಯಕ್ಷ

By

Published : Aug 25, 2020, 9:18 PM IST

ಮುದ್ದೇಬಿಹಾಳ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಾವು ಪ್ರತ್ಯಕ್ಷವಾಗಿದ್ದು, ಪೊಲೀಸ್ ಸಿಬ್ಬಂದಿ ಉರಗ ಪ್ರೇಮಿಯೊಬ್ಬರನ್ನು ಕರೆಸಿ ಅದನ್ನು ರಕ್ಷಿಸಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

ಪೊಲೀಸ್​ ಠಾಣೆ ಆವರಣದಲ್ಲಿ ಹಾವು ಪ್ರತ್ಯಕ್ಷ

ಪಟ್ಟಣದ ಸಿಪಿಐ ಕಚೇರಿಯ ಪಕ್ಕದ ಸೀತಾಫಲ ಗಿಡಗಳ ಮಧ್ಯೆ ಹಾವು ಸಂಚರಿಸುವುದನ್ನು ಗಮನಿಸಿದ ಅಪರಾಧ ವಿಭಾಗದ ಎಸ್​ಐ ಟಿ.ಜೆ.ನೆಲವಾಸಿ ಹಾಗೂ ಪೊಲೀಸ್ ಸಿಬ್ಬಂದಿ ಕೆ.ಎಸ್.ಅಸ್ಕಿ, ಸಿ.ಬಿ.ಕುಲಕರ್ಣಿ ಅವರು ಹಾವು ಹಿಡಿಯುವ ಮಲ್ಲಯ್ಯಸ್ವಾಮಿ ಹಿರೇಮಠ ಅವರನ್ನು ಕರೆಸಿದ್ದಾರೆ.

ಹಾವಿಗೆ ಊದಿನಕಡ್ಡಿ ಬೆಳಗಿ, ಚೀಲದಲ್ಲಿ ಹಿಡಿದಿದ್ದಾರೆ. ನಂತರ ಕಾಡಿಗೆ ಬಿಡುವಾಗ ನುಂಗಿದ ಕಪ್ಪೆಯನ್ನು ಹೊರ ಹಾಕಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ABOUT THE AUTHOR

...view details