ಕರ್ನಾಟಕ

karnataka

ETV Bharat / state

ವಿಜಯಪುರ: ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಶ್ರೀ - Siddeshwar Shri gave darshan to the devotees

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಬುಧವಾರ ಮಧ್ಯಾಹ್ನ 1 ಗಂಟೆಗೆ ತಮ್ಮ ಭಕ್ತರಿಗೆ ದರ್ಶನ ನೀಡಿದರು.

Siddeshwar Shri
Siddeshwar Shri

By

Published : Dec 28, 2022, 2:16 PM IST

Updated : Dec 28, 2022, 3:51 PM IST

ಭಕ್ತರಿಗೆ ದರ್ಶನ ನೀಡಿದ ಸಿದ್ದೇಶ್ವರ ಶ್ರೀ

ವಿಜಯಪುರ: ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಇಂದು ಶ್ರೀಗಳು ಜ್ಞಾನ ಯೋಗಾಶ್ರಮದಲ್ಲಿ ಮಧ್ಯಾಹ್ನ 1 ಗಂಟೆಗೆ ಸಾವಿರಾರು ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದರು.

ಕಳೆದ ಹಲವು ದಿನಗಳಿಂದ ಶ್ರೀಗಳ ಆರೋಗ್ಯದ ಬಗ್ಗೆ ವದಂತಿ ಹರಡಿತ್ತು. ಹೀಗಾಗಿ ಜಿಲ್ಲೆ, ಹೊರ ರಾಜ್ಯಗಳಲ್ಲಿರುವ ಅವರ ಭಕ್ತರು ಆತಂಕಗೊಂಡು ಜ್ಞಾನಯೋಗಾಶ್ರಮಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಅವರ ಆತಂಕ ಅರಿತ ಶ್ರೀಗಳು ಖುದ್ದು ಯೋಗಾಶ್ರಮದ ಆವರಣಕ್ಕೆ ಆಗಮಿಸಿ ದರ್ಶನ ನೀಡಿದರು. ಭಕ್ತರ ಅನುಕೂಲಕ್ಕಾಗಿ ಪೆಂಡಾಲ್ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ:ಪ್ರಧಾನಿ ಮೋದಿ ತಾಯಿ, ಶತಾಯುಷಿ ಹೀರಾಬೆನ್​ ಮೋದಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬಿಸಿಲಿನಲ್ಲಿ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಯಿತು. ಮಧ್ಯಾಹ್ನ ಶಿಕ್ಷಣ ಸಚಿವ ನಾಗೇಶ, ಸಭಾಪತಿ ಬಸವರಾಜ ಹೊರಟ್ಟಿ ಶ್ರೀಗಳನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು‌.

ನಿಲ್ಲದ ದಾಸೋಹ: ಶ್ರೀಗಳ ಆರೋಗ್ಯದ ವದಂತಿ ನಡುವೆಯೂ ಜ್ಞಾನ ಯೋಗಾಶ್ರಮದಲ್ಲಿ ನಡೆಯುವ ಅನ್ನದಾಸೋಹ ಎಂದಿನಂತೆ ಮುಂದುವರೆದಿತ್ತು.‌ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ ಅನ್ನದಾಸೋಹ ಮಾಡಲಾಯಿತು.

Last Updated : Dec 28, 2022, 3:51 PM IST

ABOUT THE AUTHOR

...view details