ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಬ್ಯಾಂಕ್-ಎಟಿಎಂಗಳಿಗೆ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ - ಭಾರತೀಯ ರೆಡ್ ಕ್ರಾಸ್ ಸಂಸ್ಥೆ

ವಿಜಯಪುರದಲ್ಲಿ 15ಕ್ಕೂ ಅಧಿಕ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ರೆಡ್ ಕ್ರಾಸ್ ಕಾರ್ಯಕರ್ತರು ಸ್ಯಾನಿಟೈಸರ್ ಸಿಂಪಡಣೆ ಮಾಡಿ, ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.

Indian Red Cross Organization
ಬ್ಯಾಂಕ್ ಹಾಗೂ ಎಟಿಎಂಗಳಿಗೆ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ

By

Published : Apr 19, 2020, 5:56 PM IST

ವಿಜಯಪುರ:ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಬ್ಯಾಂಕ್ ಹಾಗೂ ಎಟಿಎಂಗಳಿಗೆ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ ಮಾಡಲಾಯಿತು. ನಗರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ಬ್ಯಾಂಕ್​​ಗಳಿಗೆ ಬಂದು ವಹಿವಾಟು ನಡೆಸುವ ಕಾರಣ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದಾರೆ.

ಬ್ಯಾಂಕ್ ಹಾಗೂ ಎಟಿಎಂಗಳಿಗೆ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ

ಇನ್ನು 15ಕ್ಕೂ ಅಧಿಕ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕರ್ತರು ಸ್ಯಾನಿಟೈಸರ್ ಸಿಂಪಡಣೆ ಮಾಡಿ, ಬರುವ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕನಿಷ್ಠ ಅರ್ಧ ಗಂಟೆಗೊಮ್ಮೆ ಸ್ಯಾನಿಟೈಸರ್ ಬಳಸಿ ಕೈ ತೊಳೆಯುವಂತೆ ಸಿಬ್ಬಂದಿಗೆ ಜಾಗೃತಿ ಮೂಡಿಸಿದ್ದಾರೆ.

ABOUT THE AUTHOR

...view details