ವಿಜಯಪುರ :ಕಾಶ್ಮೀರ ಪಂಡಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಕಾಶ್ಮೀರನ್ನು ಬಿಟ್ಟು ಓಡಿಸಿದ ಭಯೋತ್ಪಾದಕ ಕೃತ್ಯದ ಚಿತ್ರಣವನ್ನು ಸಿನಿಮಾ ರೂಪದಲ್ಲಿ ತಯಾರಿಸಿರುವ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಈಗಿನ ಯುವಪೀಳಿಗೆ ಹಾಗೂ ಎಲ್ಲ ವರ್ಗದವರು ನೋಡಬೇಕು ಎನ್ನುವ ಕಾರಣಕ್ಕೆ ಒಂದು ವಾರದ ಶೋವನ್ನು ಉಚಿತವಾಗಿ ಪ್ರರ್ದಶಿಸಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಿರ್ಧರಿಸಿದ್ದಾರೆ.
ಈ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ್, ಈ ಸಂಬಂಧ ಚಲನಚಿತ್ರ ಮಂದಿರದ ಮಾಲೀಕರ ಜತೆ ಮಾತುಕತೆ ನಡೆಸಿದ್ದು, ಒಂದು ವಾರಗಳ ಕಾಲ ಪ್ರತಿನಿತ್ಯ ಒಂದು ಶೋ ಉಚಿತವಾಗಿ ಪ್ರದರ್ಶಿಸಬೇಕು. ಅದಕ್ಕೆ ತಗಲುವ ಟಿಕೆಟ್ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದ್ದಾರೆ.